Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಹಿಂದೂಸ್ತಾನಿ ಉರ್ದು ಮಂಚ್ ಸಂಸ್ಥೆಯಿಂದ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭ

Share

ಹಿಂದೂಸ್ತಾನಿ ಉರ್ದು ಮಂಚ್ ಸಂಘಟನೆಯಿಂದ ಆಯೋಜಿಸಲಾದ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭದಲ್ಲಿ ಜನಪ್ರಿಯ ಉರ್ದು ಕವಿಗಳು ಸ್ವರಚಿತ ಕವನಗಳನ್ನು ರಚಿಸಿ ವಾಚನ ಮಾಡಿದ್ದು ಸೃಜನಶೀಲ ವೇದಿಕೆಯಾಗಿ ಕಂಗೊಳಿಸಿತು. ನಿವೃತ್ತ ಡೆಪ್ಯೂಟಿ ಕಮಿಷನರ್ ಪೋಲೀಸ್ ಅಧಿಕಾರಿಗಳಾದ ಶ್ರೀ ಎಂ.ಡಿ ಮುಲ್ಲಾ ರವರ ಸಂಘಟನೆಯಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಪಿ. ಎಚ್. ಡಿ ಪದವಿ ಪಡೆದ ಸಂಶೋಧಕಿ ಡಾ. ಶಬಾನಾ ರವರನ್ನು ಗೌರವಿಸಿದ್ದು ಸಾಹಿತ್ಯಕ್ಕೆ ಸಂದ ಗೌರವ ಎಂದು ಭಾಸವಾಯ್ತು. ಕವಿ ಜಮೀರರವರು ಆಯೋಜಿಸಿದ್ದ ಈ ಸಮಾರಂಭವು ಸಾಹಿತ್ಯದ ಶಿಸ್ತಿಗೆ ದ್ಯೋತಕವಾಗಿತ್ತು. ನಿರೂಪಣೆ – ಸ್ವಾಗತ – ವಂದನಾರ್ಪಣೆಯು ಅನೇಕ ಕವಿಗಳಿಂದ ಪ್ರಶಂಸೆಗೆ ಪಾತ್ರವಾಯ್ತು ನಿವೃತ್ತ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠರವರು ಸಭೆಯನ್ನು ಉದ್ದೇಶಿಸಿ ಇಂತಹ ಸಭೆಗಳಿಂದ “ಸಮಾನತೆಗೆ ಆದ್ಯತೆ ದೊರಕಿ ಸಮಾಜ .ಮಾನವೀಯ ಮೌಲ್ಯ ದತ್ತ ಸಾಗಲು ಸಾಧ್ಯ “ವಾಗುತ್ತದೆ ಎಂದು ಎಲ್ಲರನ್ನೂ ಅಭಿನಂದಿಸಿದರು
ಅಧ್ಯಕ್ಷೀಯ ಭಾಷಣದಲ್ಲಿ ಇಂತಹ ಗೋಷ್ಠಿಗಳಲ್ಲಿ ವಾಚಿಸಿದ ಕವನಗಳನ್ನು ಪ್ರಕಟಿಸಬೇಕೆಂದು ಚಿಂತಿಸಲಾಯ್ತು

Written by

Bayalu Simha

Leave a Reply

Your email address will not be published. Required fields are marked *