ಯಲಹಂಕ: ಯಲಹಂಕ ಉಪನಗರದಲ್ಲಿ 26ನೇ ವರ್ಷದ ಗಣೇಶೋತ್ಸವವನ್ನು
ನಿಸರ್ಗ ಫೌಂಡೇಶನ್ (ರಿ) ವತಿಯಿಂದ ಆಡ್ಡೂರಿಯಾಗಿ ಆಚರಿಸಲಾಯಿತು.
ಉತ್ಸವದ ಮೊದಲ ದಿನ ಶ್ರೀ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಗಣಪತಿ ಹೋಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಎರಡನೇ ದಿನವಾದ ಸೆ. 26, ಶನಿವಾರ ಸಂಜೆ 7:30ಕ್ಕೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಅನ್ನದಾನ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಎಸ್. ಆರ್. ವಿಶ್ವನಾಥ್ ಅವರು ಆಗಮಿಸಿ, ಶ್ರೀ ಗಣೇಶನ ದರ್ಶನ ಪಡೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಅನ್ನದಾನ ಕಾರ್ಯಕ್ರಮದಲ್ಲಿ 4,500ಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಮೂರನೇ ದಿನ ಮಂಗಳವಾದ್ಯ, ಕಲಾತಂಡಗಳು ಹಾಗೂ ಭಕ್ತರ ಜಯಘೋಷಗಳೊಂದಿಗೆ ಗಣಪತಿಯ ಭವ್ಯ ಮೆರವಣಿಗೆ ನಡೆದು, ನಂತರ ವಿಸರ್ಜನೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.
ಉತ್ಸವದ ಯಶಸ್ಸಿಗೆ ಸಹಕರಿಸಿದ ಮಾನ್ಯ ಶಾಸಕರು, ದಾನಿಗಳು, ಸ್ವಯಂಸೇವಕರು, ಸ್ಥಳೀಯ ನಾಗರಿಕರು ಹಾಗೂ ಎಲ್ಲಾ ಭಕ್ತಾದಿಗಳಿಗೆ ನಿಸರ್ಗ ಫೌಂಡೇಶನ್ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
ಇಂತಿ
ನಿಸರ್ಗ ಫೌಂಡೇಶನ್
ಯಲಹಂಕ ಉಪನಗರ 5ನೇ ಹಂತ, ಬೆಂಗಳೂರು-64
