Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ದಾಸರಹಳ್ಳಿಯಲ್ಲಿ ಗಣೇಶೋತ್ಸವ:35 ಕೆಜಿ ಪ್ರಸಾದ ಲಡ್ಡು 5 ಲಕ್ಷದ 1ಸಾವಿರ ರೂ.ಗೆ ಹರಾಜು

Share

ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ 18 ಅಡಿ ಎತ್ತರದ ಗಣೇಶ ಮೂರ್ತಿಯ ಪ್ರಸಾದವಾದ 35 ಕೆಜಿ.ಲಡ್ಡು ಜೊತೆಗೆ ಕಾಲು ಕೆಜಿ ಬೆಳ್ಳಿಯ ಗಣೇಶ ವಿಗ್ರಹವನ್ನು ಚೊಕ್ಕಸಂದ್ರ ವಾರ್ಡ್ ಬಿಜೆಪಿ ಅಧ್ಯಕ್ಷ ಬೆಲ್ಮಾರ್ ಸುರೇಶ್ ಅವರು ಹರಾಜಿನಲ್ಲಿ ಖರೀದಿಸಿದರು.

ಶಾಸಕ ಎಸ್. ಮುನಿರಾಜು ಮಾತನಾಡಿ,’ ಮೂರು ದಿನಗಳಿಂದ ಮಹಿಳೆಯರಿಗೂ ಮತ್ತು ಪುರುಷರಿಗೂ ವಿವಿಧ ಸ್ಪರ್ಧೆಗಳು,ಆಹಾರಮೇಳ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ರಸ ಸಂಜೆ ಕಾರ್ಯಕ್ರಮ ಮತ್ತು ಮನರಂಜನೆ ಏರ್ಪಡಿಸಲಾಗಿತ್ತು.ಈ ಹಿಂದೆ ಗಣೇಶನ ಪ್ರಸಾದ ಲಡ್ಡು ಖರೀದಿಸಿದ ಎಲ್ಲರಿಗೂ ಒಳ್ಳೆಯದಾಗಿದೆ. ಹಿಂದುತ್ವದ ಸಾಂಪ್ರದಾಯಿಕ ಹಬ್ಬಗಳಲ್ಲಿ ಹೆಚ್ಚು ಒಗ್ಗೂಡುವಂತಹ ಹಬ್ಬ ಎಂದರೆ ಗೌರಿ ಗಣೇಶ ಹಬ್ಬ, ಇಂದು ಸಾವಿರಾರು ಜನರು ಭಾಗವಹಿಸಿ ಅದ್ದೂರಿ ಮೆರವಣಿಗೆ ಮಾಡಿ ಆ ಮೂಲಕ ವಿಸರ್ಜನೆ ಮಾಡಲಾಗುತ್ತಿದೆ’ ಎಂದರು.

ಹರಾಜಿನಲ್ಲಿ ಲಡ್ಡು ಪಡೆದ ಚೊಕ್ಕಸಂದ್ರ ವಾರ್ಡ್ ಬಿಜೆಪಿ ಅಧ್ಯಕ್ಷ ಬೆಲ್ಮಾರ್ ಸುರೇಶ್,’ ಗಣೇಶನ ಮೇಲೆ ಇಟ್ಟಿರುವ ಶ್ರದ್ದೆ, ಭಕ್ತಿಗೋಸ್ಕರ ಮತ್ತು ಅಭಿವೃದ್ಧಿ ಸಾಧಿಸಲು ಹಾಗೂ ನಾಡಿನ ಜನತೆಯ ಶ್ರೇಯೋಭಿವೃದ್ಧಿಗೋಸ್ಕರ ಲಡ್ಡು ಖರೀದಿಸಿದ್ದೇನೆ’ ಎಂದರು.

ಮೆರವಣಿಯಲ್ಲಿ 60 ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಇದ್ದವು. ಪಂಜಾಬ್, ಗುಜರಾತ್, ಬಾಂಬೆ, ಕೇರಳ, ಕರ್ನಾಟಕದಿಂದ ಬಂದ ಕಲಾತಂಡಗಳಿಂದ ಅದ್ದೂರಿ ಮೆರವಣಿಗೆಗೆ ಮೆರುಗು ನೀಡಿತು.

ಮೆರವಣಿಗೆ ಎಂಇಐ ಆಟದ ಮೈದಾನದಿಂದ ಪ್ರಾರಂಭವಾಗಿ ಬಾಗಲಗುಂಟೆ ಮಾರಮ್ಮನ ದೇವಸ್ಥಾನ, ಹೆಸರಘಟ್ಟ ಮುಖ್ಯ ರಸ್ತೆ, ಮಲ್ಲಸಂದ್ರದ ಪೈಪ್ ಲೈನ್, ಸೆಲೆಕ್ಷನ್ ಕಾರ್ನರ್ ಅಲ್ಲಿಂದ ದಾಸರಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಚೊಕ್ಕಸಂದ್ರದ ಕೆರೆ ಹತ್ತಿರ ವಿಸರ್ಜಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖ‌ರ್, ಶೆಟ್ಟಿಹಳ್ಳಿ ಬಿ. ಸುರೇಶ್, ಬಿ.ಎಂ. ನಾರಾಯಣ್, ಪಿ.ಹೆಚ್ ರಾಜು, ವಿನೋದ್ ಗೌಡ, ಲಕ್ಷ್ಮೀ ವೆಂಕಟೇಶ್, ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಭರತ್ ಸೌಂದರ್ಯ,ಮಾಜಿ ಅಧ್ಯಕ್ಷ ಸತೀಶ್ ಜೆವಿಎಸ್, ಸೂರಜ್ ಪೌಂಡೇಶನ್ ಸಂಸ್ಥಾಪಕಿ ಸುಜಾತ ಮುನಿರಾಜು, ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಅಳಿಯಂದಿರು ಹಾಗೂ ಬಿಜೆಪಿ ಯುವ ಮುಖಂಡರುಗಳಾದ ಬಿ.ಎಸ್. ಅನಿಲ್ ಕುಮಾರ್, ಗುರುನಿಶ್ಚಲ್ ಪಿ, ಸ್ವಪ್ನ, ಸಿ.ಎನ್. ದಯಾನಂದ್, ರೇಷ್ಮಾ ಮುನಿರಾಜು, ಮುರಳಿ, ಬಿ.ಎಂ. ಕೃಷ್ಣ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ವಿವಿಧ ಕಡೆಯಿಂದ ಆಗಮಿಸಿದ ಸಾರ್ವಜನಿಕ ಬಂದು ಭಗನಿಯರು ಉಪಸ್ಥಿತರಿದ್ದರು.

Written by

Bayalu Simha

Leave a Reply

Your email address will not be published. Required fields are marked *