ಭೂಮಿ ಪೂಜೆ ಮಾಡಿ ನಂತರ ಮಾತನಾಡಿದ ಶಾಸಕ ಬಿ.ಎ.ಬಸವರಾಜ ಅವರು ರಾಜ್ಯ ಸರ್ಕಾರ ಶಾಸಕರಿಗೆ ಅನುದಾನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು,ಇದು ಅಭಿವೃದ್ಧಿ ಕಾಮಗಾರಿಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿ ವರ್ಷಗಳೆ ಕಳೆದರೂ ಈ ಸರ್ಕಾರಕ್ಕೆ ಉದ್ಘಾಟನೆ ಮಾಡುವಷ್ಟು ಸಮಯವಿಲ್ಲ ಎಂದು ದೂರಿದರು.
ಬಿಜೆಪಿ ಸರ್ಕಾರ ಇರುವಾಗ ಮೇಲುಸೇತುವೆ ನಿರ್ಮಾಣ ಮಾಡಲು ಬಜೆಟ್ ನಲ್ಲಿ ಅನುಮೊದನೆ ಮಾಡಿದ್ದೆ ಆದರೆ ಈ ಸರ್ಕಾರ ಕೈಬಿಟ್ಟಿದೆ ಎಂದರು.
ಸಂತೆ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಮಾಡಲು 50 ಕೋಟಿ ಅನುದಾನ ತಂದಿದ್ದೆ ಆದರೆ ಯಾರೋ ಕೋರ್ಟಿನಲ್ಲಿ ತಡೆಯಾಜ್ಞೆ ತಂದಿದ್ದಾರೆ ಯಾವುದೇ ಒಂದು ಒಳ್ಳೆಯ ಕೆಲಸ ಮಾಡಲು ಹೋದರು ಅಡೆತಡೆಗಳನ್ನು ತರುತ್ತಾರೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಅನುದಾನಕ್ಕೆ ಅಲೆದಾಡುವ ಪರಿಸ್ಥಿತಿ ಆಗಿದೆ.ನಮ್ಮ ಕ್ಷೇತ್ರಕ್ಕೆ ಸಾವಿರ ಕೋಟಿ ಬೇಕು ಕೊಟ್ಟರೆ ಹಗಲು ರಾತ್ರಿ ನಾನು ನಮ್ಮ ಮುಖಂಡರು ಸೇರಿ ಕೆಲಸ ಮಾಡುತ್ತೇವೆ.ಕೊಟ್ಟಿರುವ ಹಣದಲ್ಲಿ ತುಂಬಾ ಅವಶ್ಯಕತೆ ಇರುವ ಕಾಮಗಾರಿ ಮಾಡಲಾಗುತ್ತದೆ ಎಂದರು.
ಶಾಸಕರು ಬಸ್ ನಿಲ್ದಾಣಕ್ಕೆ ಪೂಜೆ ಮಾಡಿ ಹೋದ ಐಟಿಐ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇದು ಐಟಿಐಗೆ ಸೇರಿದ ಜಾಗವಾಗಿದ್ದು ಇಲ್ಲಿ ಯಾವುದು ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶ್ರೀಕಾಂತ್,ಜಯಪ್ರಕಾಶ್, ಮುಖಂಡರಾದ ಕೆ.ಹೇಮಂತ್,ರಾಜೇಂದ್ರ,ಶ್ರೀರಾಮ್,ಶ್ರೀನಿವಾಸ್,
ಗಿರೀಶ್, ಮಾರುತಿ,ಕೃಷ್ಣ,ಮತ್ತಿತರರು ಇದ್ದರು
