Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಬೈಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆ

Share

ಬಳ್ಳಾರಿ; ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ವತಿಯಿಂದ 2025–26ನೇ ಸಾಲಿನ ವಾರ್ಷಿಕ ಮಹಾಜನ ಸಭೆ ಸೆ.24ರಂದು ನಡೆಯಿತು.
ಸಭೆಯಲ್ಲಿ ಸಂಘದ 2025–26ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರಗಳು, ಸಾಲ ವಿತರಣೆ ಹಾಗೂ ವಸೂಲಾತಿ, ಸದಸ್ಯರ ಠೇವಣಿ ಮತ್ತು ಸಂಘದ ಆರ್ಥಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು. ಸಂಘದ ವಿವಿಧ ವ್ಯವಹಾರಗಳ ಕುರಿತು ಸದಸ್ಯರಿಗೆ ವಿವರಿಸಿ, ಮುಂದಿನ ಸಾಲಿನಲ್ಲಿ ಸಂಘವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಂಘದ ಮಾಹಿತಿಯಂತೆ 2025–26ನೇ ಸಾಲಿನಲ್ಲಿ ಒಟ್ಟು 1,359 ಸದಸ್ಯರಿಗೆ ₹1,881.87 ಲಕ್ಷ ಸಾಲ ನೀಡಲಾಗಿದ್ದು, ವಿವಿಧ ಉದ್ದೇಶಗಳಿಗಾಗಿ ಸಾಲ ವಿತರಿಸಲಾಗಿದೆ. ಕೃಷಿ ಸಾಲ, ಮಧ್ಯಮಾವಧಿ ಸಾಲ, ಸಾಮಾನ್ಯ ಸಾಲ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ.
2026ರ ಮಾರ್ಚ್ 31ರ ವೇಳೆಗೆ ಸಂಘದಲ್ಲಿ ಒಟ್ಟು 3,738 ಸದಸ್ಯರಿದ್ದು, ಅವರ ಪೈಕಿ ಸಾಮಾನ್ಯ ಸದಸ್ಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳಾ ಸದಸ್ಯರು ಹಾಗೂ ಇತರ ವರ್ಗದ ಸದಸ್ಯರು ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಭೆಯಲ್ಲಿ ಸಂಘದ ಹಿಂದಿನ ಸಾಲಿನ ಕಾರ್ಯಚಟುವಟಿಕೆಗಳು ಹಾಗೂ 2025–26ನೇ ಸಾಲಿನ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಸಂಘದ ಆಸ್ತಿ–ಪಾಸ್ತಿ, ಠೇವಣಿ, ಸಾಲಬಾಕಿ, ವಿವಿಧ ನಿಧಿಗಳು ಹಾಗೂ ಇತರ ಆರ್ಥಿಕ ವಿವರಗಳನ್ನು ಸದಸ್ಯರ ಗಮನಕ್ಕೆ ತರಲಾಯಿತು.
ಮುಂದಿನ ಸಾಲಿನಲ್ಲಿ ಸದಸ್ಯರಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವುದು, ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಸಂಘದ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಸದೃಢಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂಘದ ಆಡಳಿತ ಮಂಡಳಿಯ
ಸಭೆಯಲ್ಲಿ ಸಂಘದ ಅಧ್ಯಕ್ಷರು
ಎಚ್. ಅಂಜಿನಪ್ಪ ಉಪಾಧ್ಯಕ್ಷರು ಹೊ. ತಿಪ್ಪಯ್ಯ, ಮುಖ್ಯ ಕಾರ್ಯನಿರ್ವಾಹಕರು ಮದ್ವೆಶರಾವ್,ಆಡಳಿತ ಮಂಡಳಿಯ ಸದಸ್ಯರು ಪಿ. ಎಂ ವೀರೇಶ್,ಬಿ ಶ್ರೀ ರಂಗರೆಡ್ಡಿ, ಕಲ್ಸನ ರಾಮಣ್ಣ, ಗೋಡೆ ವೀರೇಶ್ ಗೌಡ, ಸಿರಿಗೆರೆ ನೀಲಮ್ಮ, ಶಾನವಾಸಪುರ ಕರೆಮ್ಮ, ಈ ಶ್ರೀನಿವಾಸ್, ಜಿ ಎರಿಸ್ವಾಮಿ, ಕೆ. ಬಿ, ನಾಗಭೂಷಣ್, ಭಾದನಹಟ್ಟಿ ಬಸವರಾಜ್,

ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಂಡು, ಸದಸ್ಯರ ಸಲಹೆ–ಸೂಚನೆಗಳನ್ನು ಸ್ವೀಕರಿಸಲಾಯಿತು

Written by

Bayalu Simha

Leave a Reply

Your email address will not be published. Required fields are marked *