ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಿರುಮೇನಹಳ್ಳಿಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಊರಿನ ಹಿರಿಯ ಮುಖಂಡರೆಲ್ಲರು ಗ್ರಾಮಸ್ಥರು ಸೇರಿದ್ದರು, ಶಾಲೆಗೆ ಕೊಡುಗೆಗಳನ್ನು ನೀಡಿದ್ದ ದಾನಿಗಳು, ರೋಟರಿಯವರು ಹಾಗೂ ಇನ್ನಿತರರು ಭಾಗವಹಿಸಿ ಶುಭಾಶಯಗಳನ್ನು ಕೋರಿದರು ಹಾಗಯೇ ಮಕ್ಕಳು

ಅತ್ಯುತ್ತಮವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕರು ನಾವೆಲ್ಲರೂ ದೇಶದ ಒಳಿತಿಗಾಗಿ ನಿಷ್ಠೆಯಿಂದ ದುಡಿಯಬೇಕು ದೇಶವನ್ನು ಗೌರವಿಸಬೇಕು ದೇಶೀ ನಿರ್ಮಿತ ವಸ್ತುಗಳನ್ನು ಉಪಯೋಗಿಸಿ ದೇಶದ ಪ್ರಗತಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು ಕಾರ್ಯಕ್ರಮಕ್ಕೆ ಬಂದಂತಹ ಗಣ್ಯರು ಮಕ್ಕಳಿಗೆ ಒಳ್ಳೆಯ ವಿಚಾರ ತಿಳಿಸಿದರು ಹಾಗೂ ಮಕ್ಕಳ ಕಾರ್ಯಕ್ರಮ ನೋಡಿ ಪೋಷಕರು ಬಹಳ ಖುಷಿಪಟ್ಟರು ಮುಂದಿನ ದಿನಗಳಲ್ಲಿ

ಇನ್ನು ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂದು ಪೋಷಕರು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಗ್ರಾಮಸ್ಥರು ಹಾಗೂ ಪೋಷಕರು ಮತ್ತು ಶಾಲೆಯ ಪ್ರಾಂಶುಪಾಲರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಎಲ್ಲರೂ ಕಾರ್ಯಕ್ರಮದ ಪರವಾಗಿ. ಶಿಕ್ಷಕರಿಗೆ ಧನ್ಯವಾದಗಳು ತಿಳಿಸಿದರು
