Skip to content
Tuesday, 13 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

‘ಇಕೋಗ್ರಾಮ್’ ಪರಿಸರ ಸ್ನೇಹಿಯಾಗಿ ಅಳವಡಿಸಿಕೊಳ್ಳಬಹುದಾದ ಪ್ರಾಯೋಗಿಕ ಮಾದರಿ

Share

ಬ್ಯಾಟರಾಯನಪುರ : ಇಕೋಗ್ರಾಮ್ ಯೋಜನೆಯು ಸಮುದಾಯಗಳು ಪರಿಸರ ಸ್ನೇಹಿಯಾದ ತಮ್ಮ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಅಳವಡಿಸಿಕೊಳ್ಳಬಹುದಾದ ಒಂದು ಪ್ರಾಯೋಗಿಕ ಮಾದರಿಯಾಗಿದೆ ಎಂದು ಎಂಬಸಿ ಗ್ರೂಪ್‌ನ ಅಧ್ಯಕ್ಷ ಜಿತೇಂದ್ರ ವಿರ್ವಾಣಿ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮದಲ್ಲಿ ‘ದಿ ಅನಾನಿಮಸ್ ಇಂಡಿಯನ್ ಚಾರಿಟೇಬಲ್ ಟ್ರಸ್ಟ್’ ಇಕೋಗ್ರಾಮ್ ಯೋಜನೆಯ ಅಡಿಯಲ್ಲಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕದ ದಶಮಾನೋತ್ಸವ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು ‘ಇಕೋಗ್ರಾಮ್ ಯೋಜನೆಗೆ ಆರಂಭದಿಂದಲೂ ಬೆಂಬಲ ನೀಡುತ್ತಾ ಬಂದಿದ್ದೇವೆ. ದೀರ್ಘಕಾಲಿಕ ಪರಿಸರ ಬದಲಾವಣೆಯು ಸ್ಥಳೀಯ ಮಾಲೀಕತ್ವದಿಂದ ಆರಂಭವಾಗುತ್ತದೆ ಎಂಬುದು ಇಕೋಗ್ರಾಮ್ ನಿಂದ ನಾವು ಕಲಿಯಬಹುದಾದ ಅತ್ಯಂತ ಪ್ರಮುಖ ಪಾಠವಾಗಿದೆ. ಕಳೆದ ಒಂದು ದಶಕದಲ್ಲಿ ಬೆಟ್ಟಹಲಸೂರಿನ ಜನತೆ, ಗ್ರಾಮ ಪಂಚಾಯಿತಿ ಮತ್ತು ಇಕೋಗ್ರಾಮ್ ಯೋಜನೆಯ ಪಾಲುದಾರರು ಸಮುದಾಯಗಳಿಗೆ ತ್ಯಾಜ್ಯದಿಂದ ಪರಿಸರಕ್ಕೆ ಉಂಟಾಗುವ ಹಾನಿ ತಡೆಗಟ್ಟಲು ಸೂಕ್ತ ವ್ಯವಸ್ಥೆಗಳನ್ನು ಒದಗಿಸಿ ಕೊಟ್ಟಾಗ ಪರಿಹಾರಗಳು ದೈನಂದಿನ ಜೀವನದ ಒಂದು ಭಾಗವಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಕೋಗ್ರಾಮ್ ಇತರ ಸಮುದಾಯಗಳು ಕಲಿತುಕೊಳ್ಳಬಹುದಾದ ಮತ್ತು ಪರಿಸರ ಸ್ನೇಹಿಯಾದ ತಮ್ಮದೇ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಅಳವಡಿಸಿಕೊಳ್ಳಬಹುದಾದ ಒಂದು ಪ್ರಾಯೋಗಿಕ ಮಾದರಿಯಾಗಿದೆ. ಇದರ ದಶಮಾನೋತ್ಸವ ಸಮಾರಂಭವು ಸುತ್ತಮುತ್ತಲಿನ ಭಾಗದಲ್ಲಿ ಇದನ್ನು ಅನುಸರಿಸಲು ಮತ್ತು ಅಳವಡಿಸೊಕೊಳ್ಳಲು ಇನ್ನೂ ಹೆಚ್ಚಿನ ಪುಷ್ಟಿ ನೀಡಲಿದೆ ಎಂದರು.

‘ಅನಾನಿಮಸ್ ಇಂಡಿಯನ್ ಚಾರಿಟೇಬಲ್ ಟ್ರಸ್ಟ್’ನ ವ್ಯವಸ್ಥಾಪಕ ಟ್ರಸ್ಟಿ ಮೈರಿಯಂ ಶಂಕರ್ ಮಾತನಾಡಿ “ಈ ಹಿಂದೆ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆಯನ್ನು ಪರಿಚಯಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇಕೋಗ್ರಾಮ್ ಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ತನಗೆ ಅಗತ್ಯವಿರುವ ಮೂಲಸೌಕರ್ಯ, ಸಿಬ್ಬಂದಿ ಮತ್ತು ಕಾರ್ಯಾಚರಣೆಗಳ ಜೊತೆಗೆ, ಸ್ಥಳೀಯ ಸರ್ಕಾರದ ಪ್ರತಿನಿಧಿಗಳು, ಗ್ರಾಮಸ್ಥರು ಮತ್ತು ವಾಣಿಜ್ಯ ಸಂಸ್ಥೆಗಳೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳಬೇಕಾಯಿತು. ಕಳೆದ ಒಂದು ದಶಕದಲ್ಲಿ, ಸ್ಥಳೀಯ ಸಮುದಾಯದ ಸಕ್ರಿಯ ಸಹಭಾಗಿತ್ವದೊಂದಿಗೆ ತ್ಯಾಜ್ಯ ಸಂಗ್ರಹಣೆ, ಸಾಗಣೆ, ದ್ವಿತೀಯ ಹಂತದ ವಿಂಗಡಣೆ ಮತ್ತು ಸಂಸ್ಕರಣೆಯನ್ನು ಒಳಗೊಂಡಿರುವ ಸಂಪೂರ್ಣ ವ್ಯವಸ್ಥೆಯನ್ನು ನಾವು ನಿರ್ಮಿಸಿದ್ದೇವೆ ಎಂದು ತಿಳಿಸಿದರು.

ದಶಮಾನೋತ್ಸವ ಸಮಾರಂಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಧರ್ಮಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಯೋಜನೆಯ ಯಶಸ್ಸಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ತಾ.ಪಂ.ಮಾಜಿ ಸದಸ್ಯ ನಾಗರಾಜ್ ಬಾಬು, ಬೆಟ್ಟಹಲಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಚಮಿ ಶ್ರೀನಿವಾಸ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಜನಿ‌ ಪ್ರಕಾಶ್, ಬಿ.ಎಂ.ನಾಗೇಶ್, ಬಿ.ಎಸ್.ಅನಿಲ್ ಕುಮಾರ್, ಗ್ರಾ.ಪಂ.ಸದಸ್ಯರಾದ ಟಿ.ಎಸ್.ನವೀನ್ ಕುಮಾರ್, ಬಾಲರಾಜ್, ಪ್ರೇಮ ಮಂಜುನಾಥ್, ರಾಮಾಂಜಿನಪ್ಪ, ತುಳಸಮ್ಮ ವೆಂಕಟರಮಣಪ್ಪ, ಮಮತಾ ಪ್ರಶಾಂತ್, ಮುಖಂಡರಾದ ಮಂಜುನಾಥ್, ಅಮರ್, ಪಿಡಿಓ ಲೋಕನಾಥ್, ಕಾರ್ಯದರ್ಶಿ ಸುಬ್ರಮಣ್ಯ ಸೇರಿದಂತೆ ಇನ್ನಿತರರಿದ್ದರು.

ದಶಮಾನೋತ್ಸವದ ಪ್ರಯುಕ್ತ ಸ್ಥಳೀಯ ಪರಿಸರ ಸಂರಕ್ಷಣೆಗಾಗಿ ನೀಡಿದ ಕೊಡುಗೆಗಾಗಿ ಗ್ರಾಮ ಪಂಚಾಯಿತಿ ಹಾಲಿ‌ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಾಯರು, ಸದಸ್ಯರು ಸೇರಿದಂತೆ ಯೋಜನೆಯ ಯಶಸ್ಸಿಗಾಗಿ ಅಗತ್ಯ ಸಹಕಾರ ನೀಡಿದ ಸಂಘ,ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸೇವಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

 

Written by

Bayalu Simha

Leave a Reply

Your email address will not be published. Required fields are marked *