ಪೀಣ್ಯ ದಾಸರಹಳ್ಳಿ : ಭಾರತೀಯ ಸಂಪ್ರದಾಯದ ಪ್ರಕಾರ, ಹುಟ್ಟುಹಬ್ಬವನ್ನು ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ದಿನದಂದು ಆಚರಿಸುವುದು ಹೆಚ್ಚು ಶ್ರೇಷ್ಠ. ಈ ದಿನ ಹಿರಿಯರ ಆಶೀರ್ವಾದ ಪಡೆಯುವುದು, ದೇವರ ಪೂಜೆ ಮಾಡುವುದು ಮತ್ತು ಬಡವರಿಗೆ ಅಥವಾ ನಿರ್ಗತಿಕರಿಗೆ ದಾನ ಮಾಡುವುದರಿಂದ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಶುಭದ ಕ್ಲಬ್ ಅಧ್ಯಕ್ಷ ಪ್ರಶಾಂತ ಶುಭದ ಅವರು ಹೇಳಿದರು.

ಕೆಂಗೇರಿಯ ಶುಭದ ಕ್ಲಬ್ ಆವರಣದಲ್ಲಿ ಅಧ್ಯಕ್ಷ ಪ್ರಶಾಂತ್ ಉಪಾಧ್ಯಕ್ಷ ಸಂಗೀತ, ಕಾರ್ಯದರ್ಶಿ ಲಯನ್ ಕಲ್ಪನಾ ಇವರುಗಳ ನೇತೃತ್ವದಲ್ಲಿ ಡಾ. ಎಸ್ ಎಸ್ ಹಿರೇಮಠ್ ಅವರ ಹುಟ್ಟುಹಬ್ಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎಸ್ ಎಸ್ ಹಿರೇಮಠ್ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಕೋರಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಾಗರೀಕ ವೇದಿಕೆ ಅಧ್ಯಕ್ಷ ಶಿವಾನಂದ್ ,ಖ್ಯಾತ ವೈದ್ಯ ಡಾ.ವಿಜಯಕುಮಾರ್ ಹಿರೇಮಠ್,ಖ್ಯಾತ ಚಲನಚಿತ್ರ ನಿರ್ದೇಶಕ ಪರಮ ಗುಬ್ಬಿ, ಮಲ್ಲಿಕಾರ್ಜುನ್ ಸ್ವಾಮಿ,ಸಮಾಜ ಸೇವಕ ಸವಿತಾ,ಮೇಘಾ,ಪುಷ್ಪವತಿ,ಉದ್ಯಮಿ ಕವನಾ,ಶೋಭಾ, ಪವಿತ್ರಾ ಸೇರಿದಂತೆ ಶುಭದ ಕ್ಲಬ್ ಪದಾಧಿಕಾರಿಗಳು ಸದಸ್ಯರು ಡಾ. ಎಸ್. ಎಸ್ ಹಿರೇಮಠ್ ಅವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಶುಭ ಹಾರೈಸಿದರು. ನಂತರ ಪ್ರೀತಿಯ ಭೋಜನ ವ್ಯವಸ್ಥೆ ಮಾಡದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಡಾ. ಎಸ್ ಎಸ್ ಹಿರೇಮಠ್ ತಿಳಿಸಿದರು
