Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಅಟ್ಟೂರ್ ವಾರ್ಡ್ 7ರ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ ಅವರ ಜನ್ಮದಿನಾಚರಣೆ :

Share

ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಅಟ್ಟೂರು ವಾರ್ಡ್ 7ರ ಬಿಜೆಪಿ ಅಧ್ಯಕ್ಷರಾದ ನಾರಾಯಣಸ್ವಾಮಿ ಅವರ ಜನ್ಮದಿನಾಚರಣೆ ಪ್ರಯುಕ್ತ ಬೆಟ್ಟಹಳ್ಳಿಯ ಅವರ ಸ್ವಗೃಹ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ನಾರಾಯಣಸ್ವಾಮಿಯವರ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು, ಬಂಧುಗಳು ಸೇರಿದಂತೆ ಹಲವು ಗಣ್ಯರು ಕೇಕ್ ಕತ್ತರಿಸಿ, ನಾರಾಯಣಸ್ವಾಮಿ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಪಿ.ಕೆ.ರಾಜಗೋಪಾಲ್, ಯಲಹಂಕ ಬಿಜೆಪಿ ಮುಖಂಡರಾದ ಎಲ್.ಶೇಷಾದ್ರಿ, ಎಸ್.ಟಿ.ಮೋರ್ಚಾ ಅಧ್ಯಕ್ಷ ಮೋಹನ್ ಕುಮಾರ್, ಪೇಪರ್ ರಂಗಸ್ವಾಮಿ, ಬೆಟ್ಟಹಳ್ಳಿ ಬೈರೇಗೌಡ, ಶ್ರೀಕಾಂತ್, ಬೈಲಪ್ಪ ಗಂಡಪಾಣಿ, ಶಿವಕುಮಾರ್ ಗೌಡ,

ಎಸ್.ಸಿ.ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ನಾಗರಾಜ್, ಸುರೇಶ್, ಆನಂದ್, ವಾರ್ಡ 6ರ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಶ್ರೀನಿಧಿ, ಪ್ರಧಾನ ಕಾರ್ಯದರ್ಶಿಗಳಾದ ಭವ್ಯ ಸತೀಶ್, ಶೋಭಾ ದಿನೇಶ್ ಸೇರಿದಂತೆ ಇನ್ನಿತರರಿದ್ದರು.

Written by

Bayalu Simha

Leave a Reply

Your email address will not be published. Required fields are marked *