Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಮಾಜಿ ಪಾಲಿಕೆ ಸದಸ್ಯ ಎಚ್.ಎನ್. ಗಂಗಾಧರ್ ಮನೆಗೆ ಮಾಡಿದ ಶಾಸಕ ಎಸ್ ಮುನಿರಾಜು

Share

ಬೆಂಗಳೂರು: ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್. ಮುನಿರಾಜು ಅವರು ಹೆಗ್ಗನಹಳ್ಳಿಯಲ್ಲಿರುವ ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಮಾಜಿ ಬಿಬಿಎಂಪಿ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್. ಗಂಗಾಧರ್ ಅವರ ಮನೆಗೆ ಸೌಹಾರ್ದಯುತ ಭೇಟಿ ನೀಡಿ ಉಪಹಾರ ಸೇವಿಸಿ ರಾಜಕೀಯ ಮತ್ತು ಪಕ್ಷದ ಸಂಘಟನೆಯ ಕುರಿತು ಚರ್ಚೆ ನಡೆಸಿದರು.
ನಂತರ ಷಮಾತನಾಡಿದ ಶಾಸಕ ಎಸ್. ಮುನಿರಾಜು, “ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿ . ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನ ಪಕ್ಷ ಬಲವರ್ಧನೆ ಗೊಳಿಸುವುದು ನಮ್ಮ ಉದ್ದೇಶ” ಎಂದು ಹೇಳಿದರು.
ನಿಸರ್ಗ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಮಾಜಿ ಬಿಬಿಎಂಪಿ ಸದಸ್ಯರಾದ ಎಚ್.ಎನ್. ಗಂಗಾಧರ್ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಗಂಗಾಧರ್ ಶಾಸಕ ಎಸ್ ಮುನಿರಾಜು ಅವರನ್ನು ಹೂವು ಗುಚ್ಚು ನೀಡಿ ಮನೆಗೆ ಬರಮಾಡಿಕೊಂಡರು ನಂತರ ಉಪಹಾರ ಸೇವಿಸಿ ಶಾಸಕ ಎಸ್. ಮುನಿರಾಜು ಅವರು, ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.
ಮಾಜಿ ಪಾಲಿಕೆ ಸದಸ್ಯ ಎಚ್.ಎನ್. ಗಂಗಾಧರ್ ಮಾತನಾಡಿ, “ಶಾಸಕ ಎಸ್. ಮುನಿರಾಜು ಅವರು ನಮ್ಮ ಮನೆಗೆ ಆಗಮಿಸಿ ಕುಟುಂಬದೊಂದಿಗೆ ಆತ್ಮೀಯವಾಗಿ ಸಮಯ ಕಳೆದಿರುವುದು ಸಂತಸ ತಂದಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆ ಕುರಿತು ನಡೆದ ಚರ್ಚೆ ಫಲಪ್ರದವಾಗಿತ್ತು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಹೆಚ್.ಎನ್. ಗಂಗಾಧರ್ ಅವರ ಪುತ್ರಿ ತೇಜಸ್ವಿ ರಂಗನಾಥ್ ಗೌಡ ಅವರ ಮುದ್ದು ಮಗು ಕನಿಷ್ಠ ಆರ್. ಗೌಡ ಗೆ ಶಾಸಕ ಎಸ್. ಮುನಿರಾಜು ಅವರು ಶುಭ ಹಾರೈಸಿ ಕುಟುಂಬದವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಗುರು ನಿಶ್ಚಲ್ ಹಾಗೂ ರಕ್ಷಾ ದಂಪತಿ, ಹೆಗ್ಗನಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ಕಣ್ಣಪ್ಪ, ಆರ್‌ಎಸ್‌ಎಸ್‌ ಪ್ರಮುಖ ರಂಗಸ್ವಾಮಿ, ಶಿವಪುರ ವಾರ್ಡಿನ ಬಿಜೆಪಿ ಜಿಬಿಎ ಪ್ರಬಲ ಆಕಾಂಕ್ಷಿ‌ ಅಭ್ಯರ್ಥಿ ಹೆಚ್ ಪಿ ಶಿವಣ್ಣ, ಬಿಜೆಪಿ ಮುಖಂಡರಾದ ಲಕ್ಷ್ಮಣಪ್ಪ, ವೆಂಕಟೇಶಯ್ಯ, ಚಿಕ್ಕಣ್ಣ, ಲಿಝೀನ್, ಅಶೋಕ ಕಾಳಚಾರಿ, ಶ್ರೀನಿವಾಸ್, ಯೋಗೇಶ್, ಮಾಜಿ ಪಾಲಿಕೆ ಸದಸ್ಯ ಹೆಚ್ ಎನ್ ಗಂಗಾಧರ್ ಅವರ ಸುಪುತ್ರ ಸ್ವರೂಪ ಗಂಗಾಧರ್ ಮಹಿಳಾ ಮುಖ್ಯಸ್ಥೆ ಪ್ರೇಮಾ ನಂಜುಂಡಪ್ಪ, ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Written by

Bayalu Simha

Leave a Reply

Your email address will not be published. Required fields are marked *