Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2 ದಿನಗಳ ಅಂತಾರಾಷ್ಟೀಯ ಸಮ್ಮೇಳನ

Share

ಯಲಹಂಕ‌ : ಮೈಕ್ರೋ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸ್ಪರ್ಧಿಸಲು‌‌ ಮತ್ತು ಸುಧಾರಿತ ತಂತ್ರಜ್ಞಾನಕ್ಕಾಗಿ ಅಗತ್ಯ ಮೂಲಸೌಕರ್ಯ ನಿರ್ಮಿಸಲು ಬೃಹತ್ ಪ್ರಮಾಣದ ಹೂಡಿಕೆ ಮತ್ತು ಸಾಕಷ್ಟು ಸಮಯದ ಅಗತ್ಯವಿದೆ ಎಂಬುದನ್ನು ಭಾರತ ಅರಿಯಬೇಕಿದೆ ಎಂದು ಬೆಂಗಳೂರಿನ ಇಟಲಿ ರಾಯಭಾರ ಕಚೇರಿಯ ವೈಜ್ಞಾನಿಕ ರಾಜತಾಂತ್ರಿಕ ಮುಖ್ಯಸ್ಥ ಹಾಗೂ ಇಟಲಿಯ ರೋಮ್ ಟೋರ್ ವರ್ಗಾಟಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಮಾರ್ಕೊ ರೇ ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನಗಳ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ‘ಎನ್.ಎಂ.ಐ.ಟಿ.ಕಾನ್-2026 ಅನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಭಾರತವು ಅಗತ್ಯವಾದ ಸುಧಾರಿತ ಪ್ಯಾಕೇಜಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ತಕ್ಷಣವೇ ಅಲ್ಟ್ರಾ-ಹೈ ಡೆನ್ಸಿಟಿ ಇಂಟಿಗ್ರೇಷನ್ ಮತ್ತು ಚಿಪ್‌ಲೆಟ್‌ಗಳ ಮೇಲೆ ಹೆಚ್ಚು ಗಮನಹರಿಸಬೇಕು. ಮೈಕ್ರೋ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ಆಕ್ಸಿಲರೇಟರ್‌ಗಳು ಆಧುನಿಕ ತಂತ್ರಜ್ಞಾನದ ಅದೃಶ್ಯ ಅಡಿಪಾಯವಾಗಿದ್ದರೂ, ಈ ಪ್ರಮುಖ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿದೆ. ಶಿಕ್ಷಣತಜ್ಞರಾಗಿ, ನಮ್ಮ ದೈನಂದಿನ ಸಾಧನಗಳಲ್ಲಿ ಅಡಗಿರುವ ಅಸಾಧಾರಣ ಎಂಜಿನಿಯರಿಂಗ್ ಸೃಜನಶೀಲತೆಯನ್ನು ಅನಾವರಣಗೊಳಿಸುವ ಮೂಲಕ ಹಾಗೂ ಈ ಕ್ಷೇತ್ರದ ಪ್ರವರ್ತಕ ನಾವೀನ್ಯಕಾರರ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ನಾವು ಇದನ್ನು ಎದುರಿಸಬೇಕಾಗಿದೆ. ‘ಎನ್.ಎಂ.ಐ.ಟಿ.ಕಾನ್-2026’ ನಂತಹ ಸಮ್ಮೇಳನಗಳು ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಜಾಗತಿಕ ಸಂಶೋಧಕರು, ಡೆವಲಪರ್‌ ಗಳು ಮತ್ತು ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ ಎಂದರು.

ಸಮ್ಮೇಳನ ಉದ್ದೇಶಿಸಿ ಆಸ್ಟ್ರೇಲಿಯಾ ದ ಮೆಲ್ಬೋರ್ನ್ನ್ ನ ಆರ್.ಎಂ.ಐ.ಟಿ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕ ಡಾ.ಮಾಲ್ಕಾ ಎನ್. ಹಲ್ಗಮುಗೆ ಅವರು ಮಾತನಾಡಿ ‘ನನ್ನ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ಐಇಇಇ ಸ್ವಯಂಸೇವಕಿಯಾಗಿ ಸಕ್ರಿಯವಾಗಿ ತೊಡಗಿಸಿ ಕೊಂಡಿರುವುದು ನನಗೆ ನಿರಂತರವಾಗಿ ಅಮೂಲ್ಯವಾದ ವೃತ್ತಿಪರ ಬೆಳವಣಿಗೆ ಮತ್ತು ನಾಯಕತ್ವದ ಅವಕಾಶಗಳನ್ನು ಒದಗಿಸಿದೆ. ಈ ದಿಇ ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಸ್ವಯಂಸೇವಕ ಕೆಲಸವನ್ನು ಸ್ವೀಕರಿಸಬೇಕೆಂದು ಸಲಹೆ ನೀಡಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸೋಬಿಟ್ ಸೈಬರ್ ಸೆಕ್ಯೂರಿಟಿಯ ಸಂಸ್ಥಾಪಕ ಸೊನಿಲ್ ಸೊಬೇದಾರ್, ಅಮೆರಿಕಾದ ಸಾಂಟಾಕ್ಲಾರಾದ ಕ್ವಾಲ್ಕಾಮ್ ಟೆಕ್ನಾಲಜೀಸ್‌ನ ಹಿರಿಯ ಇಂಜಿನಿಯರ್ ಆದರ್ಶ್ ರವಿ ಅವರು ಸಮ್ಮೇಳನದ ಪ್ರಮುಖ ಭಾಷಣಕಾರರಾಗಿ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು. ಸಮ್ಮೇಳನದ ಅಧ್ಯಕ್ಷರು, ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ. ಪರಮೇಶಾಚಾರಿ ಬಿ.ಡಿ ಅವರು ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರು.

ಸಮ್ಮೇಳನದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ.ಸಂದೀಪ್ ಶಾಸ್ತ್ರಿ, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಸಿ. ನಾಗರಾಜ್, ಡಾ.ಜಿ.ತಿಮ್ಮರಾಜ ಯಾದವ ಸೇರಿದಂತೆ ಭಾರತ ಹಾಗೂ ವಿದೇಶಗಳ ತಾಂತ್ರಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಮತ್ತು ಅಧ್ಯಾಪಕರು ಪಾಲ್ಗೊಂಡಿದ್ದರು.

ಮಹತ್ವದ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅಮೆರಿಕ, ಮಲೇಶಿಯಾ, ಇಂಡೋನೇಷಿಯಾ, ಬಾಂಗ್ಲಾದೇಶ್, ಮಾರಿಶಿಯಸ್, ಒಮಾನ್, ಯು.ಕೆ, ಸೇರಿದಂತೆ ಭಾರತದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಾದ ಅಣ್ಣಾ ವಿಶ್ವವಿದ್ಯಾಲಯ, ಜಾಧವ್‌ಪುರ ವಿಶ್ವವಿದ್ಯಾಲಯ, ಪಿಇಎಸ್ ವಿಶ್ವವಿದ್ಯಾಲಯ, ಮಣಿಪಾಲ್ ವಿಶ್ವವಿದ್ಯಾಲಯ, ಆಮಿಟಿ ವಿಶ್ವವಿದ್ಯಾಲಯ ಮುಂತಾದ ವಿಶ್ವವಿದ್ಯಾಲಯಗಳಿಂದ ಒಟ್ಟು 2284 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾದವು. ಇವುಗಳಲ್ಲಿ ಕೇವಲ 94 ಪ್ರಬಂಧಗಳನ್ನು 11 ಸಮಾನಾಂತರ ಅಧಿವೇಶನಗಳಲ್ಲಿ ಮಂಡಿಸಲು ಆಯ್ಕೆ ಮಾಡಲಾಯಿತು.

Written by

Bayalu Simha

Leave a Reply

Your email address will not be published. Required fields are marked *