ದೇವನಹಳ್ಳಿ : ಸಹಕಾರ ಸಂಘದಲ್ಲೇ ರೈತರು ಹೆಚ್ಚಾಗಿ ವ್ಯವಹಾರ ಮಾಡುವುದರ ಮೂಲಕ ರೈತರು ಸಂಘದ ಸಾಲ ಸೇವಾ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸಿ ಎಂದು ಕಾರಹಳ್ಳಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಿ. ರಾಜೇಂದ್ರ ತಿಳಿಸಿದರು.
ತಾಲೂಕಿನ ಕಾರಹಳ್ಳಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದ 2025-26 ಸಾಲಿಗೆ 21.82 ಲಕ್ಷ ಲಾಭ ಗಳಿಸಿದೆ. ಸಂಘವು ಪ್ರತಿವರ್ಷ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಕೇವಲ ಲಾಭದ ಉದ್ದೇಶವಿಟ್ಟುಕೊಳ್ಳದೆ ತನ್ನ ಸೇವೆ ಸಲ್ಲಿಸುತ್ತಾ ರೈತರ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ನೆರವು ನೀಡುತ್ತಾ ಬಂದಿರುವುದು ಹರ್ಷದಾಯಕವಾಗಿದೆ. ರಸಗೊಬ್ಬರ ಮತ್ತು ರಾಸಾಯನಿಕ ಸಿಂಪಡಣೆಗಳ ಹೊಸ ಮಳಿಗೆಯು ಪ್ರಾರಂಭಿಸಲು ಸಿಬ್ಬಂದಿಗಳ ಅವಶ್ಯಕತೆ ಇದ್ದು, ಬಿ.ಎಸ್ಸಿ. ಮಾಡಿರುವಂತಹ ಉತ್ತಮ ಕೆಲಸಗಾರರು ದೊರೆತಲ್ಲಿ ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ಆರ್. ಮುನೇಗೌಡ ಮಾತನಾಡಿ, ರೈತರಿಗಾಗಿ ರೈತರೇ ಮಾಡಿಕೊಂಡ ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಣಬಹುದು. ಹಾಗಾಗಿ ರೈತರು ರಾಷ್ಟ್ರೀಕೃತ ಬ್ಯಾಂಕುಗಳ ಬದಲಿಗೆ ಸಹಕಾರ ಸಂಘಗಳಲ್ಲಿ ವ್ಯವಹರಿಸಿ. ಈ ಹಿಂದೆ ಇದ್ದಂತೆ ರೀತಿಯಲ್ಲಿ ವ್ಯವಸ್ಥಿತವಾಗಿ ಸಂಘವು ನಿರ್ವಹಣೆ ಮಾಡುತ್ತಿರುವುದು ಸಂತಸದ ವಿಷಯವಾಗಿದ್ದು, ಸಂಘವನ್ನು ಸದಸ್ಯರೊಂದಿಗೆ ಒಗ್ಗೂಡಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲಾ ಬ್ಯಾಂಕಿಗೆ ದೇವನಹಳ್ಳಿ ತಾಲೂಕಿನಿಂದ ಆಯ್ಕೆಯಾಗಿರುವವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಕಾರಹಳ್ಳಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ತಾಯಮ್ಮ ಅವರು ಸಭೆಯಲ್ಲಿ ವಾರ್ಷಿಕ ವರದಿ ಮತ್ತು 2026-27ನೇ ಸಾಲಿನ ಅಂದಾಜು ಆಯವ್ಯಯ ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾದ ಕೆ. ರಮೇಶ್, ಸಂಘದ ಉಪಾಧ್ಯಕ್ಷ ಆನಂದಪ್ಪ, ಮಂಡಳಿ ನಿರ್ದೇಶಕರುಗಳಾದ ಎ. ದೇವರಾಜು, ದೊಡ್ಡ ಮಲ್ಲಾಚಾರ್, ಗಂಗಪ್ಪ, ಆರ್. ದೇವರಾಜ್, ಮೀನಾಕ್ಷಿ, ಮೀನಾ ಎಸ್.ಆರ್., ಎನ್. ರಮೇಶ್, ಕೃಷ್ಣಮೂರ್ತಿ, ಮುನಿರಾಜು, ಸುಂದರೇಶ್, ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಸಿ. ಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾಯಮ್ಮ ಸೇರಿದಂತೆ ಹಲವು ಮುಖಂಡರು ಮತ್ತು ಸದಸ್ಯರು ಭಾಗಿಯಾಗಿದ್ದರು.
ತಾಲೂಕಿನ ಕಾರಹಳ್ಳಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ
