ಪೀಣ್ಯ ದಾಸರಹಳ್ಳಿ: ಮಾಜಿ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಮಾರ್ಗದರ್ಶನ ಸಹಕಾರ ಕೃಪೆಯಿಂದ ಅಂದ್ರಹಳ್ಳಿ ವಾರ್ಡಿನ ಶ್ರೀ ವಾಲ್ಮೀಕಿ ನಗರ ದಲ್ಲಿ ಶ್ರೀ ವಾಲ್ಮೀಕಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಎಂಟನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂದ್ರಹಳ್ಳಿ ವಾರ್ಡಿನ ಜಿಬಿಎ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಪ್ರಕಾಶ್ ಟಿ ಹೇಳಿದರು.
ಅವರು ಶ್ರೀ ವಾಲ್ಮೀಕಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರು ಹಾಗೂ ಅಂದ್ರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ತೋಪಯ್ಯ ಅವರ ಮಾರ್ಗದರ್ಶನದಲ್ಲಿ ಅಂದ್ರಹಳ್ಳಿ ವಾರ್ಡಿನ ಜಿಬಿಎ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಪ್ರಕಾಶ್ ಟಿ ರವರ ನೇತೃತ್ವದಲ್ಲಿ ವಾಲ್ಮೀಕಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ನಾಯಕ್ ಹಾಗೂ ಸಂಘದ ಪದಾಧಿಕಾರಿಗಳಿಂದ ಗಣೇಶೋತ್ಸವ ಪ್ರಯುಕ್ತ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಪುನಸ್ಕಾರ ಮಹಾ ಮಂಗಳಾರತಿ ಸಲ್ಲಿಸಿ ಆಗಮಿಸಿದ ಗಣ್ಯಾತಿ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಗಣೇಶೋತ್ಸವದ ಅಂಗವಾಗಿ ಸೆಪ್ಟೆಂಬರ್ 27ರ ಭಾನುವಾರ ಮೆಗಾ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳು ವಂತೆ ಇದೆ ವೇಳೆ ಕಾಂಗ್ರೆಸ್ ಯುವ ನಾಯಕ ಪ್ರಕಾಶ್ ಟಿ ಮನವಿ ಮಾಡಿಕೊಂಡರು.
ಅಂದ್ರಹಳ್ಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು ಅವರು ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿ. ತೋಪಯ್ಯ, ಎ. ರವಿ ಕೋಟಿ ನಾಗಣ್ಣ, ಸಂಘದ ಅಧ್ಯಕ್ಷ ಬಸವರಾಜ ನಾಯಕ್, ಪದಾಧಿಕಾರಿಗಳಾದ ರಾಜು ಬಿ.ಎಂ., ಶಿವಮೂರ್ತಿ ಜಿ., ಸಂತೋಷ್ ಸಿ.ಎಂ., ಕೃಷ್ಣಮೂರ್ತಿ ಡಿ.ಎನ್., ಶ್ರೀನಿವಾಸ್, ನಾಗರಾಜ್, ರವಿಕುಮಾರ್, ಪಾಪು, ಗಂಗರಾಜು, ಗೀತಮ್ಮ, ಶೋಭಾ, ರತ್ನಮ್ಮ, ಸೌಮ್ಯ, ಪುಷ್ಪ ಹಾಗೂ ಮಂಜಮ್ಮ, ಸುಧಾ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಸಮಸ್ತ ಮುಖಂಡರು ಮಹಿಳೆಯರು ಮುಂತಾದವರು ಗಣೇಶನ ದರ್ಶನ ಪಡೆದು ತೀರ್ಥ ಪ್ರಸಾದ್ ಸ್ವೀಕರಿಸಿದರು
