Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಯಲಹಂಕ ನಗರ ಮಂಡಲ ಬಿಜೆಪಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯ‌ ಅವರ 110ನೇ ಜಯಂತ್ಯೋತ್ಸವ :

Share

ಯಲಹಂಕ : ಯಲಹಂಕ ನಗರ ಮಂಡಕ ಬಿಜೆಪಿ ವತಿಯಿಂದ ಯಲಹಂಕ ಉಪನಗರ ದಲ್ಲಿರುವ ಬಿಜೆಪಿ ‌ಕಚೇರಿಯಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಭಾರತೀಯ ಜನಸಂಘದ ಮುಂಚೂಣಿ ನಾಯಕರು, ಏಕಾತ್ಮ ಮಾನವ ವಾದ ಸಿದ್ಧಾಂತದ ಪ್ರತಿಪಾದಕ ರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 110ನೆಯ ಜಯಂತೋತ್ಸವ ಕಾರ್ಯಕ್ರಮ ಅಪಾರ ಸಂಖ್ಯೆಯ ಬಿಜೆಪಿ ಮುಖಂಡರು, ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಯಿಂದ ಯಶಸ್ವಿಯಾಗಿ ನಡೆಯಿತು.

ಶಾಸಕ ಎಸ್ ಆರ್ ವಿಶ್ವನಾಥ್ ಅವರು ದೀನದಯಾಳ್ ಉಪಾಧ್ಯಕ್ಷ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ಅತ್ಯುತ್ತಮ ಚಿಂತಕರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಸ್ಪೂರ್ತಿ ಪಡೆದು, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿ, 1942ರಲ್ಲಿ ಸಂಘದ ಫೂರ್ಣಕಾಲಿಕ ಪ್ರಚಾರಕರಾಗಿ ನಿಯುಕ್ತರಾದರು. ಬಳಿಕ ಭಾರತೀಯ ಜನಸಂಘದ ಸದಸ್ಯರಾಗಿ ನಿಯುಕ್ತರಾಗಿ, 1967-68ರ ಅವಧಿಯಲ್ಲಿ ಜನಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅವರು ತಮ್ಮ ಬದುಕಿನುದ್ದಕ್ಕೂ ರಾಷ್ಟ್ರಪ್ರೇಮ, ರಾಷ್ಟ್ರಧರ್ಮ ವನ್ನು ಉಸಿರಾಗಿಸಿಕೊಂಡಿದ್ದರು. ಇಂತಹ ಹಲವು ಗಣ್ಯಮಾನ್ಯರ ರಾಷ್ಟ್ರಚಿಂತನೆ, ತ್ಯಾಗ, ಬಲಿದಾನಗಳ ಫಲವಾಗಿ ಭಾರತೀಯ ಜನತಾ ಪಕ್ಷ ಉದಯವಾಗಿ, ಇಂದು ನರೇಂದ್ರ ಮೋದಿಯವರಂತಹ ಅಪ್ರತಿಮ ಪ್ರಧಾನಿಯವರ ಸಾರಥ್ಯದಲ್ಲಿ ಭಾರತ ವಿಶ್ವಗುರುವಾಗಿ ಹೊರಹೊಮ್ಮುವತ್ತ ದಾಪುಗಾಲಿಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಯಲಹಂಕ ನಗರ ಮಂಡಲ ಅಧ್ಯಕ್ಷ ಎಂ.ಮುನಿರಾಜು, ನಗರ ಮಂಡಲ ಓಬಿಸಿ ಅಧ್ಯಕ್ಷ ವಿ.ಎಂ. ಚಂದ್ರಯ್ಯ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿ.ಪವನ್ ಕುಮಾರ್, ವಿ‌.ಎಂ.ಈಶ್ವರ್, ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್, ಅಶ್ವಥ್ ನಾರಾಯಣ, ಎಸ್‌.ಸಿ. ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ ಬಿಜೆಪಿ ಮುಖಂಡರಾದ ಮಧು, ವೈ.ಜಿ.ವಸಂತ್ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು

Written by

Bayalu Simha

Leave a Reply

Your email address will not be published. Required fields are marked *