Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ನ.14ಕ್ಕೆ ಬ್ಯಾಟರಾಯನಪುರ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನ :

Share

ಬ್ಯಾಟರಾಯನಪುರ : ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ‘3ನೇ ಕನ್ನಡ ಸಾಹಿತ್ಯ ಸಮ್ಮೇಳನ’ವು ನ.14ರ ಶನಿವಾರ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷನ್ನಾಗಿ ಥಟ್ ಅಂತ‌ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರನ್ನು‌ ಆಯ್ಕೆ‌‌ ಮಾಡಲಾಗಿದೆ ಎಂದು‌ ಕನ್ನಡ ಸಾಹಿತ್ಯ ಪರಿಷತ್ ಬ್ಯಾಟರಾಯನಪುರ ಕ್ಷೇತ್ರ ಘಟಕದ ಅಧ್ಯಕ್ಷ ರೇಣುಕ ಹೆಗ್ಗಡೆಯವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಬ್ಯಾಟರಾಯನಪುರ ಕ್ಷೇತ್ರ ಘಟಕದ ಎಲ್ಲಾ ಪದಾಧಿಕಾರಿಗಳೊಂದಿಗೆ ಸೋಮವಾರ ಯಲಹಂಕ ಉಪನಗರದ ನ್ಯಾಯಾಂಗ ಬಡಾವಣೆಯಲ್ಲಿರುವ ಡಾ.ನಾ.ಸೋಮೇಶ್ವರ ಅವರ ನಿವಾಸಕ್ಕೆ ತೆರಳಿ, ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಅವರ ಒಪ್ಪಿಗೆ ಪಡೆದು ಅವರನ್ನು ಸನ್ನಾನಿಸಿದ ನಂತರ‌ ಮಾತನಾಡಿದ ಅವರು ‘ಡಾ.ನಾ.ಸೋಮೇಶ್ವರ ಅವರು ಸಮ್ಮೇಳನ ಕುರಿತಂತೆ ಪುಸ್ತಕ ಮಾರಾಟದ ಮಳಿಗೆ, ಪುಸ್ತಕ ಲೋಕಾರ್ಪಣೆ, ನುರಿತ ಲೇಖಕರಿಂದ ಪುಸ್ತಕದ ಬಗ್ಗೆ ಮಾಹಿತಿ, ಪುಸ್ತಕವನ್ನು ಮನೆ ಮನೆಗೆ ತಲುಪಿಸುವುದು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದು, ಅವರ ಸಲಹೆಗಳನ್ನು ಕ.ಸಾ.ಪ.ದ ಪದಾಧಿಕಾರಿ ಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು. ಸಾಹಿತ್ಯ ಸಮ್ಮೇಳನ ಆಯೋಜಬೆಗೆ ಕ್ಷೇತ್ರದ ಶಾಸಕರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣಬೈರೇಗೌಡ ಅವರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಕ.ಸಾ.ಪ.ಬ್ಯಾಟರಾಯನಪುರ ಕ್ಷೇತ್ರ ಘಟಕದ ಪದಾಧಿಕಾರಿ ಗಳಾದ ಹೆಚ್.ಎ.ಪುಟ್ಟಸ್ವಾಮಿ, ದೇವರಾಜು, ಲಿಯೋರೆಡ್ಡಿ, ನೂತನ್ ದೊಶೆಟ್ಟಿ, ಹರಿಪ್ರಸಾದ್, ಚಿಕ್ಕನಾರಾಯಣಸ್ವಾಮಿ, ಲಕ್ಷೀನಾರಾಯಣ, ಮೋಹನ್ ಕುಮಾರ್ ಶಿಂದೆ, ಉನ್ನಿಕೃಷ್ಣನ್, ಆಂಜನೇಯ, ಪರಮೇಶ್, ಚಂದ್ರಕಾಂತ್ ನಾಯಕ್, ಕಾಶಿನಾಥ್, ಶಂಕರಪ್ಪ ಉಪಸ್ಥಿತರಿದ್ದರು

Written by

Bayalu Simha

Leave a Reply

Your email address will not be published. Required fields are marked *