ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಪೀಣ್ಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೇ ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸಿ” ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೈ.ಬಿ.ಎಚ್. ಜಯದೇವ್ ಹಕ್ಕೊತ್ತಾಯ ಮಂಡಿಸಿದರು.
ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಬಾಗಲಗುಂಟೆ ಮಾರಮ್ಮ ದೇವಸ್ಥಾನದ ರಂಗ ಮಂದಿರದಲ್ಲಿ ಜ್ಞಾನಪೀಠ ದಿಗ್ಗಜರ ವೇದಿಕೆಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೈ.ಬಿ.ಎಚ್. ಜಯದೇವ್ ಮಾತನಾಡಿದರು.
ಕ್ಷೇತ್ರದ ಎಂಟನೇ ಮೈಲಿ ವೃತ್ತದಲ್ಲಿ ‘ ರಾಷ್ಟ್ರ ಕವಿ ಡಾ. ಕುವೆಂಪು ಪುತ್ಥಳಿ’ ಯನ್ನು ಪ್ರತಿಷ್ಠಾಪಿಸಿ- ಸ್ಥಳೀಯ ನಿವಾಸಿಗಳಿಗೆ ಸಾಹಿತ್ಯದ ಕಂಪನ್ನು ಪ್ರಭಾವಿಸುವಲ್ಲಿ ನೆರವಾಗಬೇಕು ” ಎಂದು ಪ್ರಜಾಪ್ರತಿನಿಧಿ ಗಳಿಗೆ ಕಿವಿಮಾತು ಹೇಳಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಗ್ರಂಥಾಲಯ ಸ್ಥಾಪಿಸಿ ಸಾರ್ವಜನಿಕರಿಗೆ ಪುಸ್ತಕ ಪ್ರೇಮ ಬೆಳೆಸುವಲ್ಲಿ ಶಾಸಕರು ಮುಂದಾಗಬೇಕು” ಎಂದು ವೈ.ಬಿ.ಎಚ್. ಜಯದೇವ್ ಮನವಿ ಮಾಡಿದರು. ಕನ್ನಡ ನಾಡು, ನುಡಿ, ನೆಲ ,ಜಲ, ಪರಂಪರೆಗಳನ್ನು ಪ್ರತಿನಿಧಿಸುವ , ಸಾಂಕೇತಿಸುವ ಕನ್ನಡ ಸಾಹಿತ್ಯ ಸಮ್ಮೇಳನಗಳು – ನಮ್ಮ ಕನ್ನಡದ ಅಸ್ಮಿತೆ, ಅಸ್ತಿತ್ವವನ್ನು ಉಳಿಸುವಲ್ಲಿ ಸಾಹಿತ್ಯ, ಸಂಸ್ಕೃತಿಗಳನ್ನು ಕನ್ನಡಿಗರ ನೆರವಾಗುತ್ತವೆ’ ಎಂದು ಸಾಹಿತಿ ಹಾಗೂ ವಾಗ್ಮಿ ಡಾ. ಸಿ ಸೋಮಶೇಖರ್ ಅಭಿಪ್ರಾಯ ಪಟ್ಟರು.
” ಕನ್ನಡ ಸಾರಸ್ವತ ಲೋಕದಲ್ಲಿ ಮೂರು ದಶಕಗಳಿಂದ ಕವಿಯಾಗಿ , ಸಾಹಿತಿಯಾಗಿ , ಸಂಘಟಕರಾಗಿ, ವಾಗ್ಮಿಯಾಗಿ ಹೆಸರಾಗಿರುವ ಸೃಜನಶೀಲ ವ್ಯಕ್ತಿ ವೈ.ಬಿ.ಎಚ್. ಜಯದೇವ್ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕರನ್ನಾಗಿ ಗೌರವಿಸಿರುವದು ಸ್ತುತ್ಯಾರ್ಹ, ಅಭಿನಂದನಾರ್ಹ ಎಂದು ಡಾ. ಸಿ . ಸೋಮಶೇಖರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜು ಎ. ಕಾಳೇನಹಳ್ಳಿ ಮೇಷ್ಟ್ರು ಅವರು ರಚಿಸಿದ ‘ ನೆಳಬು’ ಕವನ ಸಂಕಲನ ವನ್ನು ಖ್ಯಾತ ಸಾಹಿತಿ ಮಣ್ಣೇ ಮೋಹನ್ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಕಂನಾಡಿಗಾ ನಾರಾಯಣ, ಡಾ.ಟಿ. ಗೋವಿಂದರಾಜ್, ರತ್ನ ಕಾಳೇಗೌಡ, ವಿ.ಟಿ. ರಾಮಕೃಷ್ಣಯ್ಯ, ಮಮತಾ ವಾರನಹಳ್ಳಿ , ಡಾ. ಸಂಪದಾ, ಸಿರಿಗಂಧ ರಾಮಕೃಷ್ಣಪ್ಪ , ಗೀತಾ ವಿ. ಆರ್, ವಿಶೇಷ ಆಹ್ವಾನಿತರಾಗಿ ಭೂಮಿಕಾ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಲತಾ ಕುಂದರಗಿ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ವಿಚಾರ ಗೋಷ್ಠಿ, ಆರೋಗ್ಯ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಗೌರವ ಸಮರ್ಪಣೆ , ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗೀತಗಾಯನವನ್ನು ಎನ್. ಡಿ. ಕೃಷ್ಣಮೂರ್ತಿ ಹಾಗೂ ಶೇಖರ್ ಟಿ.ಎಸ್, ಗೀತಾ ವಿ.ಆರ್, ಎಂಟನೇ ಮೈಲಿ ವೃತ್ತದಿಂದ ಸಮ್ಮೇಳನ ನಡೆಯುವ ರಂಗಮಂದಿರದವರೆಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವೈವಿಧ್ಯ ಜಾನಪದ ತಂಡಗಳು ಶಾಲಾ ವಿಧ್ಯಾರ್ಥಿಗಳ ಜೊತೆಗೆ ಅತ್ಯಂತ ವೈಭವವಾಗಿ ಜರುಗಿದವು.
