Skip to content
Thursday, 15 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಯಲಹಂಕದಲ್ಲಿ ಸೇವಾ ಸಂಕಲ್ಪ, ಸೇವಾ ಸೇತು ಅಭಿಯಾನ ಕಾರ್ಯಕ್ರಮ

Share

ಯಲಹಂಕ : ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ ಸಶಕ್ತ ಮತ್ತು ಸ್ವಾವಲಂಬಿ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿದ್ದು, ಜಾಗತಿಕ‌‌ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನಮಾನ ದೊರೆತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ಪಟ್ಟರು.

.ಯಲಹಂಕ ನಗರ ಮಂಡಲ ಬಿಜೆಪಿ ವತಿಯಿಂದ ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ‌ ಗುರುವಾರ ಆಯೋಜಿಸಿದ್ದ ಸೇವಾ ಸಂಕಲ್ಪ ಮತ್ತು ಸೇವಾ ಸೇತು ಅಭಿಯಾನ ಮತ್ತು ವಿವಿಧ ಪ್ರಕೋಷ್ಟಗಳ ವಿಶೇಷ ಸಭೆ ಉದ್ದೇಶಿಸಿ ಮಾತನಾಡಿದ ಅವರು ‘ಗುಜರಾತ್ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಆರಂಭವಾದ ನರೇಂದ್ರ ಮೋದಿ ಅವರ‌ ಆಡಳಿತಾತ್ಮಕ ಪಯಣ ಸುದೀರ್ಘವಾಗಿ ಸಾಗಿ ಬಂದಿದ್ದು, ಅವರ ಸಾರ್ವಜನಿಕ ಜೀವನಕ್ಕೆ ಇದೀಗ 25 ಸಾರ್ಥಕ ವಸಂತಗಳು ತುಂಬುತ್ತಿವೆ. ಈ ಸುದೀರ್ಘ ಸೇವಾ ಅವಧಿಯಲ್ಲಿ ಅವರು ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೋದಿಯವರು ದೇಶದ ಜನತೆಯ ಕಣ್ಮಣಿಯಾಗಿದ್ದಾರೆ. ವಿಶೇಷವಾಗಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಅವರ ಕಳೆದ 12 ವರ್ಷಗಳ ಆಡಳಿತದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಸ್ವಾವಲಂಬಿ ಹಾಗೂ ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ತಮ್ಮ ಸೇವಾವಧಿಯಲ್ಲಿ ಅವರು ದೇಶದಲ್ಲಿ ಅತ್ಯಂತ ಬಲವಾದ ಆಡಳಿತಾತ್ಮಕ ಮತ್ತು ಮೂಲಸೌಕರ್ಯದ ಅಡಿಪಾಯ ನಿರ್ಮಿಸಿದ್ದಾರೆ. ರಾಷ್ಟ್ರ ನಿರ್ಮಾಣದ ಈ ಸುದೀರ್ಘ ಪಯಣದಲ್ಲಿ ಸಾಕಾರಗೊಂಡಿ ರುವ ಅವರ ಕ್ರಾಂತಿಕಾರಕ ನಿರ್ಧಾರಗಳು, ಪಾರದರ್ಶಕ ಆಡಳಿತ ಹಾಗೂ ದೇಶದ ಪ್ರಗತಿಯ ನೈಜ ಸಾಧನೆಗಳನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಿಳಿಸುವುದು ಅತ್ಯವಶ್ಯಕವಾಗಿದೆ. ನರೇಂದ್ರ ಮೋದಿ ಹಾಕಿಕೊಟ್ಟಿರುವ ಗಟ್ಟಿಯಾದ ಅಡಿಪಾಯ ಮತ್ತು ಪರಿವರ್ತನೆಯ ಸಾಧನೆಗಳು ನಿಜಕ್ಕೂ ಅತ್ಯದ್ಭುತವಾಗಿವೆ, ಇಂತಹ ಅಪ್ರತಿಮ ಆಡಳಿತ ಗಾರರನ್ನು ಪ್ರಧಾನಿಯಾಗಿ ಪಡೆದಿರುವ ನಾವೇ ಧನ್ಯರು, ಅದಕ್ಕಾಗಿ ನಾವು ಹೆಮ್ಮೆಪಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ದೇಶದ ರಕ್ಷಣೆ, ಅಭಿವೃದ್ಧಿ ಮತ್ತು ಬಲಿಷ್ಠ ಭಾರತ ನಿರ್ಮಾಣದ ನಿಟ್ಟಿನಲ್ಲಿ ದೇಶಕ್ಕೆ ನರೇಂದ್ರ ಮೋದಿ ಅವರ ನಾಯಕತ್ವ ಮುಂದಿನ ಹತ್ತಾರು ವರ್ಷಗಳ ಕಾಲ ಅತ್ಯವಶ್ಯಕವಾಗಿದೆ. ಕಳೆದ 25 ವರ್ಷಗಳಿಂದ ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಅವರು ನೀಡಿರುವ ಸಾರ್ಥಕ ಸೇವೆ ಮತ್ತು ಜನಪರ ಆಡಳಿತ ಸ್ಮರಣೀಯವಾದುದು.
ಸ್ವಚ್ಛ ಭಾರತ ಅಭಿಯಾನ, ಜನ್ ಧನ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿ, ಮುದ್ರಾ ಯೋಜನೆ, ಉಜ್ವಲ ಯೋಜನೆ ಹಳ್ಳಿಗಳ ಪ್ರತಿ ಮನೆಗಳಿಗೆ ನೀರು ತಲುಪಿಸುವ ಜಲಜೀವನ್ ಮಿಷನ್ ಮುಂತಾದ ಯೋಜನೆಗಳ ಮೂಲಕ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸಿದ್ದಾರೆ. ವಿದೇಶಾಂಗ ನೀತಿಯಲ್ಲಿ ಅವರು ತೋರಿರುವ ಜಾಣ್ಮೆ ಮತ್ತು ಸೂಕ್ಷ್ಮ ನಡೆಗಳು ವಿಶ್ವದ ಗಮನ ಸೆಳೆದಿವೆ. ಮೋದಿ ಅವರು ದೇಶದ ಪ್ರಧಾನಿಯಾದ ನಂತರ ಜಾಗತಿಕ‌ ಮಟ್ಟದಲ್ಲಿ ಭಾರತೀಯರಿಗೆ ಅತ್ಯುನ್ನತ ಗೌರವ ದೊರೆಯುತ್ತಿರುವುದೇ ಅವರ ಸಮರ್ಥ ಆಡಳಿತಕ್ಕೆ ಹಿಡಿದ ಕೈಗನಗನ್ನಡಿಯಾಗಿದೆ. 2014ರ ಬಳಿಕ ವಿದೇಶಗಳಿಗೆ ತೆರಳುವ ಭಾರತೀಯರಿಗೆ ಸಿಗುತ್ತಿರುವ ಗೌರವವೇ ಇದಕ್ಕೆ ಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಪ್ರಕೋಷ್ಠ, ವೈದ್ಯಕೀಯ ಪ್ರಕೋಷ್ಟ, ಬೀದಿ ಬದಿ ವ್ಯಾಪಾರಿಗಳ ಪ್ರಕೋಷ್ಟ, ಸಾಮಾಜಿಕ ಜಾಲತಾಣ ಪ್ರಕೋಷ್ಟ, ಕಲಾ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಸೇರಿದಂತೆ ವಿವಿಧ ಪ್ರಕೋಷ್ಟಗಳ ಸಂಚಾಲಕರು ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಪ್ರಕೋಷ್ಠ, ವೈದ್ಯಕೀಯ ಪ್ರಕೋಷ್ಟ, ಬೀದಿ ಬದಿ ವ್ಯಾಪಾರಿಗಳ ಪ್ರಕೋಷ್ಟ, ಫಲಾನುಭವಿಗಳ ಪ್ರಕೋಷ್ಟ, ಸಾಮಾಜಿಕ ಜಾಲತಾಣ ಪ್ರಕೋಷ್ಟ, ಕಲಾ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಸೇರಿದಂತೆ ವಿವಿಧ ಪ್ರಕೋಷ್ಟಗಳ ಸಂಚಾಲಕರು ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಫಲಾನುಭವಿಗಳ ಪ್ರಕೋಷ್ಟದ ರಾಜ್ಯ ಸಂಚಾಲಕ ದುರ್ಗೇಶ್, ಜಿಲ್ಲಾ ಸಂಚಾಲಕಿ ಆಶಾಲೋಹಿತ್, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿ ವಿ.ಎಂ.ಈಶ್ವರ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಓಬಿಸಿ‌ ಮೋರ್ಚಾ ಅಧ್ಯಕ್ಷ ವಿ.ಎಂ.ಚಂದ್ರಯ್ಯ, ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಬೃಂದಾವೀರೇಶ್, ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ವಾರ್ಡ್ ಅಧ್ಯಕ್ಷರುಗಳಾದ ವಿ.ವಿ.ರಾಮಮೂರ್ತಿ, ನರಸಿಂಹಮೂರ್ತಿ, ಓಂ ರವೀಂದ್ರ, ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಮಧುಸೂದನ್, ಎಸ್.ಸೋಮಶೇಖರ್, ಅಟ್ಟೂರು ವಿಶ್ವ, ಸುನಿಲ್ ಕುಮಾರ್, ಪ್ರಭಾ, ಶಿವಕುಮಾರ್‌ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ವಿವಿಧ ಪ್ರಕೋಷ್ಟಗಳ ಸಂಚಾಲಕರಿದ್ದರು.

Written by

Bayalu Simha

Leave a Reply

Your email address will not be published. Required fields are marked *