Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಭಕ್ತಿ ಭಾವದಿಂದ ಶ್ರೀ ವರಬಸವೇಶ್ವರ ಸ್ವಾಮಿ ರಥೋತ್ಸವ ಆಚರಣೆಗೆ

Share

ಬಳ್ಳಾರಿ: ಶ್ರಾವಣ ಮಾಸದ ಕಡೆಯ ಸೋಮವಾರದಂದು ನಗರದ ರೂಪನಗುಡಿ ರಸ್ತೆಯ ಶ್ರೀ ವರಬಸವೇಶ್ವರ ದೇವಸ್ಥಾನದ ರಥೋತ್ಸವ ಕಾರ್ಯಕ್ರಮವು ಭಕ್ತಿ ಭಾವದಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಎಂದು ಶ್ರೀ ವರಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭು ಉದ್ದಿ ತಿಳಿಸಿದರು.

ದೇವಸ್ಥಾನದಲ್ಲಿ ಇಂದು ಮುಂಜಾನೆಯಿಂದಲೇ ಪುಷ್ಪಾರ್ಚನೆ, ಕುಂಕುಮಾರ್ಚನೆ ಮಹಾ ಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ವರಬಸವೇಶ್ವರ ಸ್ವಾಮಿಗೆ ವಿಶೇಷವಾದ ಪೂಜೆಯನ್ನು ನಡೆಸಲಾಯಿತು. ಭಕ್ತರು ಇಂದು ಮುಂಜಾನೆಯಿಂದಲೇ ಹೂವು ಹಣ್ಣು ಕಾಯಿಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ , ತಮ್ಮ ಭಕ್ತಿಯನ್ನು ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷರಾದ ಪ್ರಭು ಉದ್ಧಿ, ಕಳೆದ ಹಲವಾರು ವರ್ಷಗಳಿಂದ ಶ್ರೀ ವರಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಪ್ರತಿವರ್ಷ ಶ್ರಾವಣ ಮಾಸದ ಕಡೆ ಸೋಮವಾರದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವನ್ನು ನಡೆಸಲಾಗುತ್ತದೆ, ಈ ದೇವಸ್ಥಾನವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಶತಮಾನಕ್ಕೂ ಹಿಂದೆ ಹಿಂದೆ ನಿರ್ಮಾಣವಾಗಿದ್ದು ಇದು ನಮ್ಮ ಪೂರ್ವಜರು ಕಟ್ಟಿದ ದೇವಸ್ಥಾನ ಆಗಿರುತ್ತದೆ ಇದನ್ನು ಈಗ ಪುನರ್ಜೀವನಗೊಳಿಸಲು ಉದ್ದೇಶಿಸಲಾಗಿದೆ ದೇವಸ್ಥಾನದ ಎಲ್ಲಾ ಭಕ್ತರು ಸಹ ಕೈಜೋಡಿಸಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ದೇವಸ್ಥಾನದಲ್ಲಿ ಯಾವುದೇ ಜಾತಿ ಧರ್ಮದ ತಾರತಮ್ಯ ಇರುವುದಿಲ್ಲ ಎಲ್ಲಾ ಜಾತಿ ಜನಾಂಗದವರು ಆಗಮಿಸಿ ಸ್ವಾಮಿಯ ದರ್ಶನವನ್ನು ಪಡೆದು ಸೇವೆಯನ್ನು ಮಾಡುತ್ತಿದ್ದಾರೆ ಅದೇ ರೀತಿಯಲ್ಲಿ ರಥೋತ್ಸವದ ಹಿಂದಿನ ದಿನವು ಸಹ ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ರಾಜಕುಮಾರ್ (ರಾಜಣ್ಣ ) ಭಕ್ತಾದಿಗಳಲ್ಲಿ ಕೋರಿದರು

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಮೇಲ್ವಿಚಾರಕ ಎರಿಸ್ವಾಮಿ ಮಾತನಾಡಿ, ಇಂದು ಸಂಜೆ ಐದು ಗಂಟೆಗೆ ರಥೋತ್ಸವ ಜರುಗಲಿದ್ದು ಭಕ್ತರು ಆಗಮಿಸಿ ಈ ರಥೋತ್ಸವದಲ್ಲಿ ಪಾಲ್ಗೊಂಡು ವರಬಸವೇಶ್ವರ ಸ್ವಾಮಿಯೇ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ
ಸಂಗನಕಲ್ಲು ಲಿಂಗರಾಜ್ ತೆಂಗಿನ್ಕಾಯಿ ರಾಜಣ್ಣ ಶೇಷಪ್ಪ ಮಂಜು, ಗಂಗಾ ಸೇರಿದಂತೆ ಹಲವಾರು ಜನ ಸ್ವಾಮಿಯ ಭಕ್ತಾದಿಗಳು ಇದ್ದರು.

: ಶ್ರಾವಣ ಮಾಸದ ಕಡೆಯ ಸೋಮವಾರದಂದು ನಗರದ ರೂಪನಗುಡಿ ರಸ್ತೆಯ ಶ್ರೀ ವರಬಸವೇಶ್ವರ ದೇವಸ್ಥಾನದ ರಥೋತ್ಸವ ಕಾರ್ಯಕ್ರಮವು ಭಕ್ತಿ ಭಾವದಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಎಂದು ಶ್ರೀ ವರಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭು ಉದ್ದಿ ತಿಳಿಸಿದರು.

ದೇವಸ್ಥಾನದಲ್ಲಿ ಇಂದು ಮುಂಜಾನೆಯಿಂದಲೇ ಪುಷ್ಪಾರ್ಚನೆ, ಕುಂಕುಮಾರ್ಚನೆ ಮಹಾ ಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ವರಬಸವೇಶ್ವರ ಸ್ವಾಮಿಗೆ ವಿಶೇಷವಾದ ಪೂಜೆಯನ್ನು ನಡೆಸಲಾಯಿತು. ಭಕ್ತರು ಇಂದು ಮುಂಜಾನೆಯಿಂದಲೇ ಹೂವು ಹಣ್ಣು ಕಾಯಿಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ , ತಮ್ಮ ಭಕ್ತಿಯನ್ನು ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷರಾದ ಪ್ರಭು ಉದ್ಧಿ, ಕಳೆದ ಹಲವಾರು ವರ್ಷಗಳಿಂದ ಶ್ರೀ ವರಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಪ್ರತಿವರ್ಷ ಶ್ರಾವಣ ಮಾಸದ ಕಡೆ ಸೋಮವಾರದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವನ್ನು ನಡೆಸಲಾಗುತ್ತದೆ, ಈ ದೇವಸ್ಥಾನವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಶತಮಾನಕ್ಕೂ ಹಿಂದೆ ಹಿಂದೆ ನಿರ್ಮಾಣವಾಗಿದ್ದು ಇದು ನಮ್ಮ ಪೂರ್ವಜರು ಕಟ್ಟಿದ ದೇವಸ್ಥಾನ ಆಗಿರುತ್ತದೆ ಇದನ್ನು ಈಗ ಪುನರ್ಜೀವನಗೊಳಿಸಲು ಉದ್ದೇಶಿಸಲಾಗಿದೆ ದೇವಸ್ಥಾನದ ಎಲ್ಲಾ ಭಕ್ತರು ಸಹ ಕೈಜೋಡಿಸಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ದೇವಸ್ಥಾನದಲ್ಲಿ ಯಾವುದೇ ಜಾತಿ ಧರ್ಮದ ತಾರತಮ್ಯ ಇರುವುದಿಲ್ಲ ಎಲ್ಲಾ ಜಾತಿ ಜನಾಂಗದವರು ಆಗಮಿಸಿ ಸ್ವಾಮಿಯ ದರ್ಶನವನ್ನು ಪಡೆದು ಸೇವೆಯನ್ನು ಮಾಡುತ್ತಿದ್ದಾರೆ ಅದೇ ರೀತಿಯಲ್ಲಿ ರಥೋತ್ಸವದ ಹಿಂದಿನ ದಿನವು ಸಹ ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ರಾಜಕುಮಾರ್ (ರಾಜಣ್ಣ ) ಭಕ್ತಾದಿಗಳಲ್ಲಿ ಕೋರಿದರು

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಮೇಲ್ವಿಚಾರಕ ಎರಿಸ್ವಾಮಿ ಮಾತನಾಡಿ, ಇಂದು ಸಂಜೆ ಐದು ಗಂಟೆಗೆ ರಥೋತ್ಸವ ಜರುಗಲಿದ್ದು ಭಕ್ತರು ಆಗಮಿಸಿ ಈ ರಥೋತ್ಸವದಲ್ಲಿ ಪಾಲ್ಗೊಂಡು ವರಬಸವೇಶ್ವರ ಸ್ವಾಮಿಯೇ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ
ಸಂಗನಕಲ್ಲು ಲಿಂಗರಾಜ್ ತೆಂಗಿನ್ಕಾಯಿ ರಾಜಣ್ಣ ಶೇಷಪ್ಪ ಮಂಜು, ಗಂಗಾ ಸೇರಿದಂತೆ ಹಲವಾರು ಜನ ಸ್ವಾಮಿಯ ಭಕ್ತಾದಿಗಳು ಇದ್ದರು.

Written by

Bayalu Simha

Leave a Reply

Your email address will not be published. Required fields are marked *