ಹೊಸಕೋಟೆ : ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಮಾಜಿ ಸಚಿವ ಎಂಟಿಬಿ ನಾಗರಾಜ್ ರವರ ಆದೇಶದಂತೆ ಪ್ರಧಾನಿ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ಸತತ 25 ವರ್ಷಗಳ ನಿರಂತರ ಜನಸೇವೆ ಸೇವಾ ಸಂಕಲ್ಪ ಅಭಿಯಾನದ ಮೊದಲ ಕಾರ್ಯಕ್ರಮ ನಗರ ಮಂಡಲ ಅಧ್ಯಕ್ಷರಾದ ಬಾಲಚಂದ್ರನ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ ರಾ ವೆಂಕಟೇಶ್ ರವರು ಮಾತನಾಡಿ ನಮ್ಮ ನಾಯಕರ ಎಂಟಿಬಿ ನಾಗರಾಜ್ ಅಣ್ಣನವರ ಆದೇಶದಂತೆ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಘಟಕದ ವತಿಯಿಂದ ಎಲ್ಲಾ ನಾಯಕರುಗಳು ಬೆಳಿಗ್ಗೆಯಿಂದ ಅವರ ಊರುಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.
ಒಂದು ತಿಂಗಳಗಳ ಕಾಲ ಕಾರ್ಯಕ್ರಮಗಳು ನಡೆಯಲಿದೆ ಸುಮಾರು 15 ರಿಂದ 20 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮೊದಲನೇ ಕಾರ್ಯಕ್ರಮ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪರಗಳನ್ನು ವಿತರಿಸಿದ್ದೇವೆ, ನರೇಂದ್ರ ಮೋದಿಜಿ ಅವರ ಜನಪರ ಆಡಳಿತದಿಂದ ನಮ್ಮ ಭಾರತ ದೇಶ ಇಡೀ ಪ್ರಪಂಚವೇ ಗುರುತಿಸುವಂತೆ ಮಾಡಿದ್ದಾರೆ, ಅವರ ಜನಪರ ಅಭಿವೃದ್ಧಿಪರ ಆಡಳಿತ ಇನ್ನೂಬೇಕು ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಹೊಸಕೋಟೆ ನಗರ ಮಂಡಲ ಅಧ್ಯಕ್ಷರಾದ ಬಾಲಚಂದ್ರನ್ ರವರು ಮಾತನಾಡಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಘಟಕದ ವತಿಯಿಂದ ಎಲ್ಲಾ ನಾಯಕರುಗಳು ಬೆಳಿಗ್ಗೆಯಿಂದ ಅವರ ಊರುಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ಒಂದು ತಿಂಗಳಗಳ ಕಾಲ ಕಾರ್ಯಕ್ರಮಗಳು ನಡೆಯಲಿದೆ, ಸುಮಾರು 15 ರಿಂದ 20 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ದೇವರು ಅವರಿಗೆ ಆರೋಗ್ಯ ಆಯಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ದೇವನಗುಂದಿ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿನಂಜಪ್ಪ, ಕಾರ್ಯದರ್ಶಿ ಮುರುಳಿಧರ್, ನಗರಸಭೆ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ಬೆಂಗಳೂರು ಗ್ರಾಮಾಂತರ ಎಸ್ ಟಿ ಮೋರ್ಚಾ ಅಧ್ಯಕ್ಷರು ಮುನಿಕೃಷ್ಣ (ಕಿಟ್ಟಿ), ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ ನಾಗೇಶ್, ಹೊಸಕೋಟೆ ನಗರ ಮಂಡಲ ಮಹಿಳಾ ಅಧ್ಯಕ್ಷರಾದ ಯಶೋದ, ಹಾಗೂ ರವಿಕುಮಾರ್, ರವಿ, ಗುರುಪ್ರಸಾದ್ ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲಗಳ ವಿತರಣೆ
