Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಡಿ ಎಸ್ ಮ್ಯಾಕ್ಸ್ ಆವಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ.

Share

ಯಲಹಂಕ ಸುದ್ದಿ; ಸೆಪ್ಟೆಂಬರ್ 2026 ರಂದು ಅಗ್ರಹಾರ ಬಡಾವಣೆಯ. ಡಿಎಸ್ ಮ್ಯಾಕ್ಸ್ ಸಿನರ್ಜಿ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮವನ್ನು ಸಿನರ್ಜಿ ಗೆಳೆಯರ ಬಳಗ ದ ವತಿಯಿಂದ ಆಯೋಜಿಸಲಾಗಿತ್ತು.

ಈ ಶುಭ ಸಂದರ್ಭದಲ್ಲಿ, ಗುರು ವಿದುಷಿ ಶ್ರೀಮತಿ ಸುನಿತಾ ಸುಕುಮಾರನ್ ಅವರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣ ಕಲಾಲಯದ ಮಕ್ಕಳು ತಮ್ಮ ನೃತ್ಯ ಪ್ರತಿಭೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಉತ್ಸಾಹದಿಂದಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ಭರತನಾಟ್ಯದ ವಿವಿಧ ಪ್ರಸ್ತುತಿಗಳ ಜೊತೆಗೆ, ಶ್ರೀ ಮಹಾವಿಷ್ಣುವಿನ ದಶಾವತಾರವನ್ನು ಆಧರಿಸಿದ ನೃತ್ಯರೂಪಕ ಹಾಗೂ ಕರ್ನಾಟಕದ ಶ್ರೀಮಂತ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಪ್ರತಿಬಿಂಬಿಸುವ ಯಕ್ಷಗಾನ ಪ್ರದರ್ಶನವೂ ಅತ್ಯಂತ ಮನಮೋಹಕವಾಗಿ ಮೂಡಿಬಂದಿತು.

ಮಕ್ಕಳ ಅದ್ಭುತ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಡಿ ಎಸ್ ಮ್ಯಾಕ್ಸ್ ಅಲ್ಲಿರುವ ಗಣ್ಯರು ನಿವಾಸಿಗಳು ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇಯಿತು

Written by

Bayalu Simha

Leave a Reply

Your email address will not be published. Required fields are marked *