ಪೀಣ್ಯ ದಾಸರಹಳ್ಳಿ: ಸಮೀಪದ ಯಶವಂತಪುರ ವಿಧಾನಸಭಾ ಕ್ಷೇತ್ರದ ಡಿ ಗ್ರೂಪ್ ಲೇಔಟ್ ನಲ್ಲಿರುವ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗ ವತಿಯಿಂದ 4ನೇ ವರ್ಷ ಗಣೇಶೋತ್ಸವ ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಅದ್ಭುತ ಕಾರ್ಯ ಕ್ರಮಕ್ಕೆ ಮಾಜಿ ಪಾಲಿಕೆ ಸದಸ್ಯ ಹನುಮಂತೆಗೌಡ್ರು, ಸತೀಶ್ ಹೊಸಳ್ಳಿ, ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಯೋಗಾನಂದ, ಜಿಲ್ಲಾ ಉಪಾಧ್ಯಕ್ಷ ಗಿರೀಶ್, ಜಿಲ್ಲಾ ಉಪಾಧ್ಯಕ್ಷ ಯೋಗೇಶ್ ಶೆಟ್ಟಿ, ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಮಂಜುನಾಥ್, ಸಂತೋಷ್ ಜವರಾಯಿಗೌಡ, ಅರುಣ್ ಗೌಡ್ರು, ಆಗಮಿಸಿ ಗಣೇಶ್ ದರ್ಶನ ಪಡೆದು ತೀರ್ಥ ಪ್ರಸಾದ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಿದ್ಧಿವಿನಾಯಕ ಗೆಳೆಯರ ಬಳಗದ ತಂಡದವರು ಕರಣ್ ಹರ್ಷ ವಿಶ್ರುಥ್ ಗುಣ ನಿತ್ಯ ಚೈತ್ರ ಆಶಾ ಬಿಂದು ಹರಿಪ್ರಿಯಾ ದೀಕ್ಷಾ ರಕ್ಷಿತಾ ಮತ್ತು ತಂಡದವರಿಂದ ನಾಲ್ಕನೇ ವರ್ಷ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
