ಕೆ.ಆರ್.ಪುರ: ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಹೊರಮಾವು ಗ್ರಾಮದಲ್ಲಿ ಗಿಡ ಗಳನ್ನು ನೀಡುವ ಮೂಲಕ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಣೆ ಮಾಡಲಾಯಿತು.
ಆರು ದಿನಗಳು ನಡೆದ ಗಣೇಶೋತ್ಸವ ಅದ್ದೂರಿಯಾಗಿ ತೆರೆ ಕಂಡಿತ್ತು,ಹೊರಮಾವು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಅದ್ದೂರಿ ಉತ್ಸವದಲ್ಲಿ ಭಾಗವಹಿಸಿದ್ದರು.
ಗಣೇಶ ಹಬ್ಬದ ದಿನ ಸೋಮವಾರ ಪ್ರತಿಷ್ಠಾಪನೆ ಮಾಡಲಾಗಿದ್ದು,ಆರು ದಿನಗಳ ವಿಶೇಷ ಪೂಜೆ ನೆರವೇರಿಸಲಾಯಿತು.
ಆರನೇ ದಿನ ಶನಿವಾರ ಅನ್ನದಾನ ಸಂತರ್ಪಣೆ ಹಾಗೂ ಸಸಿಗಳನ್ನು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಹಬ್ಬ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭರತ್ ,ಮಂಜು,ಹೇಮಂತ್,ವಿ.ವಿನೋದ್,ಶ್ಯಾಮ್,ಧನಂಜಯ,ವಿನೋದ್,
,ವೇಣು,ಶ್ರೀಧರ್,
ಪ್ರವೀಣ್,ಗುರು ಮತ್ತಿತರರು ಇದ್ದರು.
