Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಭಾನುವಾರದಂದು ಹಿಂದೂ ಮಹಾ ಗಣಪತಿ ಬೃಹತ್ ಶೋಭಾ ಯಾತ್ರೆ : ಶರಣ ಗೌಡ

Share

ಬಳ್ಳಾರಿ ಸೆಪ್ಟೆಂಬರ್ : ನಗರದ ಸೆಂಟೇನರಿ ಹಾಲ್ನಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಹಿಂದೂ ಮಹಾ ಗಣಪತಿ ಮೂರ್ತಿಯನ್ನು ಅಂತರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದು ಈ ಮಹಾ ಗಣಪತಿಯ ಬೃಹತ್ ಶೋಭಾ ಯಾತ್ರೆಯನ್ನು ಸೆಪ್ಟಂಬರ್ 20 ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಶರಣ ಪಟೇಲ್ ತಿಳಿಸಿದರು

ಇಂದು ಸೆಂಟೇನರಿ ಹಾಲ್ ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣಗೌಡ ಈ ಬೃಹತ್ ಶೋಭಾ ಯಾತ್ರೆಯು ರಾಯಲ್ ಸರ್ಕಲ್ ಬ್ರುಸ್ಪೇಟ್ ಸರ್ಕಲ್ ಮೋದಿ ಸರ್ಕಲ್ ಮಾರ್ಗವಾಗಿ ಸಾಗಲಿದೆ ಈ ಶೋಭಾ ಯಾತ್ರೆಯನ್ನು ಅತ್ಯಂತ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದ್ದು ಈ ಶೋಭಾ ಯಾತ್ರೆಯಲ್ಲಿ ನಮ್ಮ ದೇಶಿಯ ಕಲೆ ಮಲ್ಲಕಂಬವನ್ನು ಚಲಿಸುವ ವಾಹನದಲ್ಲಿ ಪ್ರದರ್ಶಿಸುವರು ಜೊತೆಗೆ ಮಂಗಳೂರು ಭಾಗದ ಕಾಂತಾರ ದೈವ ಕೋಲಾ ಸಹ ಈ ಶೋಭ ಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ ಜೊತೆಗೆ ಕೇರಳದ ಸಾಂಸ್ಕೃತಿಕ ತಂಡಗಳು ಸಹ ಭಾಗವಹಿಸಲಿವೆ ಕಾರಣ ನಗರದ ಸಾರ್ವಜನಿಕರು, ಕುಟುಂಬ ಸಮೇತರಾಗಿ ಈ ಶೋಭಾ ಯಾತ್ರೆಯಲ್ಲಿ ಭಾಗವಹಿಸಿ ವಿನಾಯಕನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.
ಈ ಶೋಭಾ ಯಾತ್ರೆಯ ಅಂಗವಾಗಿ ಗೋಲ್ಡನ್ ಕೋಟೆಡ್ ಗಣೇಶ ಮೂರ್ತಿಯನ್ನು ಗೆಲ್ಲುವ ಸುವರ್ಣ ಅವಕಾಶವಿದ್ದು ಭಕ್ತಾದಿಗಳು ಭಾನುವಾರದಂದು ಸಂಜೆ 4 ಗಂಟೆಗೆ ಸೆಂಟೇನರಿ ಹಾಲ್ಗೆ ಬಂದು ತಮಗೆ ನೀಡಿದ ಡಿಪ್ ಕೋಪನನ್ನು ಡಬ್ಬಿಯಲ್ಲಿ ಹಾಕಬೇಕು ಈ ಕೋಪನಗಳನ್ನು ರಾಯಲ್ ಸರ್ಕಲ್ ಮತ್ತು ಬ್ರೂಸ್ ಪೇಟೆಯಲ್ಲಿ ಎತ್ತಲಾಗುವುದು ಮತ್ತು ಪ್ರತಿ ಸರ್ಕಲ್ ನಲ್ಲಿ 10 ಮತ್ತು 11 ಗಣೇಶ ಮೂರ್ತಿಗಳನ್ನು ವಿಜೇತರಿಗೆ ನೀಡಲಾಗುವುದು ಎಲ್ಲರೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಈ ಡಿಪ್ ನಲ್ಲಿ ಭಾಗವಹಿಸುವ ಮೂಲಕ ಮಾಡಿಕೊಳ್ಳಬೇಕೆಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಇಂದು ಮಹಾಗಣಪತಿ ಉತ್ಸವ ಸಮಿತಿಯ ಅನೇಕರಿದ್ದರು.

Written by

Bayalu Simha

Leave a Reply

Your email address will not be published. Required fields are marked *