Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಮಳೆರಾಯನಿಗೆ ನೀರಿನ ಅಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥನೆ

Share

ಪೀಣ್ಯ ದಾಸರಹಳ್ಳಿ: ಮಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನಗರ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ, ಲಗ್ಗೆರೆಯ ಪಾರ್ವತಿ ನಗರ ಹಾಗೂ ಪ್ರೀತಿ ನಗರದಲ್ಲಿ ಶ್ರೀ ದುಗ್ಗಲಮ್ಮ ಹಿರಿಯ ನಾಗರಿಕರ ಸಂಘದ ವತಿಯಿಂದ “ಉಯ್ಯೋ ಉಯ್ಯೋ ಮಳೆರಾಯ” ಕಾರ್ಯಕ್ರಮವನ್ನು ಆಯೋಜಿಸಿ ವರುಣದೇವನಿಗೆ ನೀರಿನ ಅಭಿಷೇಕ ಮಾಡುವ ಮೂಲಕ ವರುಣದೇವನಿಗೆ ಮಳೆಗಾಗಿ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಾರ್ವತಿ ನಗರ ಹಾಗೂ ಪ್ರೀತಿ ನಗರದ ನಿವಾಸಿಗಳು ಮಳೆರಾಯನಿಗೆ ನೀರಿನ ಅಭಿಷೇಕ ಹೂವು ತೆಂಗಿನಕಾಯಿ ಅಗರ್ ಬತ್ತಿ ಕರ್ಪೂರ ಅರಸಿಣ ಕುಂಕುಮ ಅರ್ಪಿಸುವ ಮೂಲಕ ವರುಣ ದೇವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡರು. “ಮಳೆ ಬಂದು ರೈತನ ಬದುಕು ಹಸನಾಗಲಿ, ಕೆರೆ-ಕಟ್ಟೆಗಳು ತುಂಬಿ ನಗರ-ಗ್ರಾಮಗಳ ನೀರಿನ ಸಮಸ್ಯೆ ದೂರವಾಗಲಿ” ಎಂಬ ಆಶಯದೊಂದಿಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಷೇಕ್ ಎಲೆಕ್ಟ್ರಿಕಲ್ಸ್ ಮಾಲೀಕರು ಆದ ಪಿ. ಕೃಷ್ಣಯ್ಯ ರವರು , ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನಗರದಲ್ಲಿಯೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಮಳೆ ಉತ್ತಮವಾಗಿ ಸುರಿದು ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂದು ಆಶಿಸಿದರು.
ಶ್ರೀ ದುಗ್ಗಲಮ್ಮ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರು ಎಂ . ರಮೇಶ್ ರವರು ಮಾತನಾಡಿ, ಮಳೆ ಪ್ರಕೃತಿಯ ಜೀವನಾಡಿಯಾಗಿದ್ದು, ಮಳೆಯ ಕೊರತೆಯಿಂದ ಕೃಷಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆರಾಯನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಉತ್ತಮ ಮಳೆಯಾಗಲಿ ಎಂಬ ಆಶಯದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ . ಬೈರೇಗೌಡ್ರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಉಪಾಧ್ಯಕ್ಷರು (ನಿವೃತ್ತಿ ಪೊಲೀಸ್ ಇಲಾಕೆ) ,ಗೌರವ ಅಧ್ಯಕ್ಷರು ಬಿ. ರಾಮಯ್ಯ, ಅಭಿಷೇಕ್ ಎಲೆಕ್ಟ್ರಿಕಲ್ಸ್ ಮಾಲೀಕರು ಪಿ. ಕೃಷ್ಣಯ್ಯ ,ನರಸಿದೇವ್ರು ಹಾಗು ದೇವರಾಜ್ರವರು ನಿಮಿಷಾಂಬ ಎಲೆಕ್ಟ್ರಾನಿಕ್ಸ್ , ಶ್ರೀನಿವಾಸ್ ಹ್ಯಾಲೋಬ್ಲಾಕ್ ,ಸುನಿಲ್ ಕಾವ್ಯ ,ವಿಜಯ ಬ್ಯಾಂಕ್‌ನ ಹುಚ್ಚಪ್ಪ, ಬಾಲಗ್ರಹ ಮಂತ್ರದ ಶ್ರೀನಿವಾಸ್ ವಿ., ಬೋರೇಗೌಡ, ಚಿಕ್ಕ ಹುಚ್ಚಪ್ಪ, ಮುರಾರಪ್ಪ, ಗೋವಿಂದರಾಜು, ಕೆಇಬಿ ಲಕ್ಷ್ಮಣ್, ಪುಟ್ಟಸ್ವಾಮಿ, ಗೋವಿಂದಪ್ಪ, ಶಿವಪ್ಪ, ಬೆಟ್ಟಸ್ವಾಮಿ , ಕಾಂತರಾಜು ಪಿ.ಎಚ್, ಮೂರ್ತಣ್ಣ ಪೀಣ್ಯ ,ಪದ್ಮ ಕೃಷ್ಣಯ್ಯ, ಭವ್ಯನರ್ಸಿದೇವ್ರು , ಕಾವ್ಯ ಸುನಿಲ್ , ಮಹಾಲಕ್ಷ್ಮಿ ಶ್ರೀನಿವಾಸ್,ಲತಾ ನಟರಾಜ್ ,ನಾಗರಾಜ್ ಎನ್.ಟಿ., ಗಂಗಣ್ಣ ಎನ್.ಟಿ., ಸುಬ್ರಮಣಿ ಬಿಲ್ಡಿಂಗ್ ಕಾಂಟ್ರಾಕ್ಟ್ , ರಂಗನಾಥ , ಎಸ್.ಬಿ.ಐ. ಕೃಷ್ಣ, ಗಿರಿ ಗೌಡ್ರು, ಮರಿಯಣ್ಣ, ಚನ್ನಮುತ್ತು, ಕಾವ್ಯ ನಾಗು, ಸೇರಿದಂತೆ ಪಾರ್ವತಿ ನಗರ ಹಾಗೂ ಪ್ರೀತಿ ನಗರದ ನಿವಾಸಿಗಳು ಭಾಗವಹಿಸಿದ್ದರು.

Written by

Bayalu Simha

Leave a Reply

Your email address will not be published. Required fields are marked *