Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಹನುಮಂತನಗರದ ಸರ್ಕಾರಿ ಶಾಲೆಯಲ್ಲಿ ಲಯನ್ಸ್ ಸಂಸ್ಥೆಯಿಂದ ಯಶಸ್ವಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Share

ಬೆಂಗಳೂರು ದಕ್ಷಿಣ ವಲಯ :-1ರ ಸುಂಕೇನಹಳ್ಳಿ, ಹನುಮಂತನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ (ಕನ್ನಡ ಮತ್ತು ಆಂಗ್ಲ ಮಾಧ್ಯಮ), ಲಯನ್ಸ್ ಕ್ಲಬ್ ಜಿಲ್ಲಾ 317F ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸಿಟಿ ಆನಂದ್ (Lions Club of Bangalore City Anand) ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್ ಸಂಸ್ಥೆಯು, ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ ಹಾಗೂ ಪೋಷಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಅನುಭವಿ ವೈದ್ಯರ ತಂಡದೊಂದಿಗೆ ಈ ಕೆಳಗಿನ ತಪಾಸಣೆಗಳನ್ನು ನಡೆಸಿತು:
ಮಕ್ಕಳಿಗೆ ವಿಶೇಷ ತಪಾಸಣೆ:
ಕಣ್ಣಿನ ತಪಾಸಣೆ (Vision Check-up): ದೃಷ್ಟಿದೋಷ ಹಾಗೂ ಕಣ್ಣಿನ ನೈರ್ಮಲ್ಯ ಪರೀಕ್ಷೆ.
ದಂತ ತಪಾಸಣೆ (Dental Check-up): ಹಲ್ಲುಗಳ ಆರೋಗ್ಯ ಹಾಗೂ ನೈರ್ಮಲ್ಯ ರಕ್ಷಣೆ ಕುರಿತು ಸಲಹೆ.
ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ನಿವಾರಣೆ ಬಗ್ಗೆ ಮಾಹಿತಿ ನೀಡಲಾಯಿತು

ಲಯನ್ಸ್ ಸಂಸ್ಥೆಯ ಶ್ರೀ ಲಯನ್ ಅಭಿಷೇಕ್ ಬಾಂಟಿಯ ಮತ್ತು ಶ್ರೀ ಲಯನ್ ರಾಜೇಂದ್ರ ಶಿಬಿರದ ನೇತೃತ್ವ ವಹಿಸಿ ಯಶಸ್ವಿಗೊಳಿಸಿದರು:
ಲಯನ್ ಪ್ರಸನ್ನ ಕುಮಾರ್ (District Coordinator – Vision)
ಲಯನ್ ಮನೋಜ್ (District Coordinator – Dental) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೊತೆಗೆ
ಶಿಬಿರದಲ್ಲಿ ಪತ್ರಕರ್ತೆ ಹಾಗೂ ಸಮಾಜ ಸೇವಕಿ ಶ್ರೀಮತಿ ತಾರಾ ನಟರಾಜ್ ರವರು ಭಾಗವಹಿಸಿ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಸಹಕರಿಸಿ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ ಎನ್., “ಆರೋಗ್ಯವೇ ಭಾಗ್ಯ. ನಮ್ಮ ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಂಡಿರುವುದು ಸಂತಸದ ಸಂಗತಿ,” ಎಂದರು.
ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿ, ಸಮಾಜದ ಪ್ರತಿಯೊಬ್ಬರ ಆರೋಗ್ಯ ಸುಧಾರಣೆಗೆ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದಾಗಿ ತಿಳಿಸಿದರು.
ನೂರಾರು ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಫಲಕಾರಿ ಆರೋಗ್ಯ ಶಿಬಿರವನ್ನು ಆಯೋಜಿಸಿದ ಲಯನ್ಸ್ ಸಂಸ್ಥೆಗೆ ಹಾಗೂ ಸಹಕರಿಸಿದ ಶಾಲಾ ಆಡಳಿತ ಮಂಡಳಿಗೆ ಸಾರ್ವಜನಿಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

Written by

Editor Desk - Bayalu Simha News

Leave a Reply

Your email address will not be published. Required fields are marked *