ಯಲಹಂಕ : ಹೆಸರಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಹಾಗೂ ರೈತರಿಗೆ ಸಂಘದ ಪ್ರಗತಿಗಾಗಿ ಅವರು ನೀಡಿರುವ ಸಹಕಾರ ಮತ್ತು ಕೊಡುಗೆಯನ್ನು ಸ್ಮರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ರೈತರು ಆದ ಆವಲಹಳ್ಳಿ ತಿಮ್ಮರಾಯಿಗೌಡ, ಮಾದಪ್ಪನಹಳ್ಳಿ ವಿಜಯಕುಮಾರ್, ಕೆಂಪೇಗೌಡ, ಹುರುಳಿಚಿಕ್ಕನಹಳ್ಳಿಯ ಎಚ್.ಸಿ.ರಾಜೇಶ್, ಮಾವಳಿಪುರ ಟಿ.ರಮೇಶ್, ಕೊಲವರಾಯನಹಳ್ಳಿ ಕೆ.ಪಿ.ಮಂಜುನಾಥ್, ಮೈಲಪ್ಪನಹಳ್ಳಿ ಹರೀಶ್, ಗೋಪಾಲ್, ಬ್ಯಾಲಕೆರೆ ಮಂಜುನಾಥ್, ವೆಂಕಟೇಶ್, ಪಿ.ಕೆ.ರಾಜಣ್ಣ, ಮಹದೇವು, ಶಿವಕೋಟೆ ಅಶೋಕ್ ಸೇರಿದಂತೆ ಹಲವು ಮಹಿಳಾ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷೆ ಹೆಚ್.ಸಿ.ರತ್ನ ರಾಮಕೃಷ್ಣಪ್ಪ, ನಿರ್ದೇಶಕರಾದ ಹೆಚ್.ಡಿ.ಕೃಷ್ಣಪ್ಪ, ಅಶ್ವಥ್ ಬಿ., ಹೆಚ್.ಎನ್.ಕೇಶವ, ನಂಜುಂಡಪ್ಪ ಸಿ., ರಾಘವೇಂದ್ರ ಕೆ.ಜೆ., ಲಕ್ಷ್ಮಣ ಬಿ.ಎಂ., ಬಿ.ಹೆಚ್.ಸುರೇಶ್, ಹೆಚ್.ಎ.ಅನಸೂಯ, ಚಂದ್ರಪ್ಪ, ಜಯಮ್ಮ, ಸಿಇಓ ಬಿ.ಎನ್.ಪುರುಷೋತ್ತಮ, ವ್ಯವಸ್ಥಾಪಕ ಭರತ್, ಮಾಜಿ ನಿರ್ದೇಶಕ ಪಿ.ಕೆ.ರಾಜಣ್ಣ ಸೇರಿದಂತೆ ಕಚೇರಿಯ ಸಿಬ್ಬಂದಿಗಳಿದ್ದರು.
