ದೊಡ್ಡಬಳ್ಳಾಪುರ : ಯಲಹಂಕ-ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಹೊಸಹುಡ್ಯ ಗ್ರಾಮದ ಬಳಿ ನೂತನವಾಗಿ ನಿರ್ಮಾಣಗೊಂಡಿದ್ದ ‘ಎಂ.ಆರ್.3519 ಫ್ಯಾಮಿಲಿ ರೆಸ್ಟೋರೆಂಟ್’ ಅನ್ನು ಕನ್ನಡ ಚಿತ್ರನಟ ಶರಣ್ ಅವರು ಬುಧವಾರ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ‘ಬೆಂಗಳೂರು ನಗರ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು, ನಗರದ ಬೆಳವಣಿಗೆಯ ಅಗತ್ಯತೆಗೆ ಪೂರಕವಾಗಿ ಮೂಲ ಸೌಕರ್ಯಗಳು, ಉದ್ಯಮ, ಹೋಟೆಲ್ ಗಳು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಆತ್ಮೀಯ ಸ್ನೇಹಿತರು, ಮಾರೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮರಳುಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಮುನಿ ರಾಮಣ್ಣ(ಎಂ.ಆರ್.) ಅವರು ‘ಎಂ.ಆರ್.3519 ಫ್ಯಾಮಿಲಿ ರೆಸ್ಟೋರೆಂಟ್’ ಎಂಬ ಹೊಸ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದಾರೆ. ಮೂಲತಹ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಮುನಿರಾಮಣ್ಣ ಅವರು ‘ರೈತ ದೇಶದ ಅನ್ನದಾತ’ ಎಂಬ ನಾಣ್ಣುಡಿಗೆ ಬದ್ಧರಾಗಿ, ಅನ್ನದಾನದ ಕಾಯಕವನ್ನು ಆರಂಭಿಸಿರುವುದು ಸಂತೋಷದ ಸಂಗತಿ. ಅತ್ಯುತ್ತಮವಾದ ಜಾಗದಲ್ಲಿ, ಅತ್ಯಾಧುನಿಕ ರೀತಿಯ ವಿಶಾಲವಾದ ಕಟ್ಟಡದಲ್ಲಿ ಅಗತ್ಯ ಪಾರ್ಕಿಂಗ್ ಸೌಲಭ್ಯದೊಂದಿಗೆ ನೂತನ ರೆಸ್ಟೋರೆಂಟ್ ಆರಂಭಿಸಿದ್ದು, ಭಾರತೀಯ ಪಾರಂಪರಿಕ ಶೈಲಿಯ ಸೌದೆ ಒಲೆ ಅಡಿಗೆ, ಹಿತ್ತಾಳೆ ಪ್ಲೇಟ್, ಸ್ಪೂನ್ ಮತ್ತು ಲೋಟಗಳಲ್ಲಿ ಆಹಾರ ಸೇವಿಸುವ ಆರೋಗ್ಯಕ್ಕೆ ಪೂರಕವಾದ ವಿನೂತನ ವ್ಯವಸ್ಥೆಯನ್ನು ರೆಸ್ಟೋರೆಂಟ್ ನಲ್ಲಿ ಕಲ್ಪಿಸಿರುವುದು ನಿಜಕ್ಕೂ ಸಂತೋಷದ ಸಂಗತಿ, ನುರಿತ ಪಾಕ ಪ್ರವೀಣರಿಂದ ಅಡಿಗೆ ತಯಾರಿಸುವ ವಿಧಾನ ಪ್ರಶಂಸಾರ್ಹವಾದುದು.

ರೈತರಾಗಿರುವ ಮುನಿರಾಮಣ್ಣ ಅವರು ತಮ್ಮ ರೈತ ವೃತ್ತಿಗೆ ಅನುಪಮ ರೀತಿಯಲ್ಲಿ ಹೊಂದಿಕೆಯಾಗುವ ಆಹಾರ ಉದ್ಯಮದಲ್ಲಿ ತೊಡಗಿಕೊಂಡಿರುವುದು ಅತ್ಯುತ್ತಮವಾದ ಬೆಳವಣಿಗೆಯಾಗಿದೆ, ಅನ್ನದಾನದ ಈ ಸೇವೆಯಲ್ಲಿ ಮುನಿ ರಾಮಣ್ಣ ಅವರು ಯಶಸ್ವಿಯಾಗಿ ಇಂತಹ ಇನ್ನೂ ಹತ್ತಾರು ಶಾಖೆಗಳನ್ನು ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಆರಂಭಿಸುವಂತಾಗಲಿ ಎಂದು ಶುಭ ಹಾರೈಸಿದರು.

ನೂತನ ರೆಸ್ಟೋರೆಂಟ್ ಉದ್ಘಾಟನೆಯ ಈ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನೇಗೌಡ, ಮಾರೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರು, ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಮುಖಂಡ ಅಂಜಿನಪ್ಪ(ಪುಟ್ಟು), ಟಿಎಪಿಎಂಸಿ ಮಾಜಿ ಅಧ್ಯಕ್ಷ ಸಿಂಗಹಳ್ಳಿ ವೆಂಕಟೇಶ್, ಬಮೂಲ್ ನಿರ್ದೇಶಕ ಆನಂದ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ, ಬೆಂ.ನಗರ ಜಿಲ್ಲಾ ಕೆಡಿಪಿ ಸದಸ್ಯ ಬಿ.ಕೆ. ನಾರಾಯಣಸ್ವಾಮಿ, ಜಾಲ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್, ಬಿಗ್ ಬಾಸ್ ಖ್ಯಾತಿಯ ನಟಿ ಅಶ್ವಿನಿ, ನಿರ್ಮಾಪಕರಾದ ಸೋಮಶೇಖರ್, ಮುಖಂಡರಾದ ಎಂ.ಹೊಸಹಳ್ಳಿಯ ಹೆಚ್.ಎಸ್. ಕೃಷ್ಣಮೂರ್ತಿ, ಮರಳುಕುಂಟೆ ಸುರೇಶ್, ಕೃಷ್ಣಪ್ಪ, ಯಡಿಯೂರು ಶಾಂತಕುಮಾರ್, ಶಿವರಾಜ್ ಅರಸ್, ಚೊಕ್ಕನಹಳ್ಳಿ ನಾಗೇಶ್, ಅರಕೆರೆಯ ಸಿ.ಎಲ್.ಎನ್.ಗೌಡ, ಹೂವಿನಾಯಕನಹಳ್ಳಿ ಗಂಗಾಧರ್, ದಾಸೇನಹಳ್ಳಿ ಜಗದೀಶ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಮುನಿರಾಮಣ್ಣ ಅವರ ಸ್ನೇಹಿತರು, ಹಿತೈಷಿಗಳು ಉಪಸ್ಥಿತರಿದ್ದರು.
