ಹೊಸಕೋಟೆ : ತಾಲೂಕಿನ ಕಸಬಾ ಹೋಬಳಿಯಲ್ಲಿ ಬರುವ ,ಚಿಕ್ಕನಲ್ಲೂರಹಳ್ಳಿ,ಚೋಳಪ್ಪನಹಳ್ಳಿ, ಪಿಲ್ಲಗುಂಪೆ , ದೊಡ್ಡಹುಲ್ಲೂರು ,ಗ್ರಾಮಗಳಲ್ಲಿ ಹಾಲಿನ ಡೈರಿ ಗುದ್ದಲಿ ಪೂಜೆ, ಕೆರೆ ಅಭಿವೃದ್ಧಿ, ಸಿ.ಸಿ ರಸ್ತೆ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ , ಸರ್ಕಾರಿ ಶಾಲೆಯ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜೆಯನ್ನು ಕಿಯೋನಿಕ್ಸ್ ಅಧ್ಯಕ್ಷರು ಶಾಸಕರಾದ ಶರತ್ ಬಚ್ಚೇಗೌಡ ರವರು ಗಣ್ಯರೊಂದಿಗೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಸಬಾ ಹೋಬಳಿಯಲ್ಲಿ ಬರುವ ದೊಡ್ಡ ಹುಲ್ಲೂರು ಗ್ರಾಮ ಪಂಚಾಯಿತಿ, ಚೋಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸಿ ಸಿ ರಸ್ತೆ, ಕೆರೆ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಸರ್ಕಾರಿ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ.

ತಾಲೂಕಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಅನುದಾನಗಳನ್ನು ನೀಡುತ್ತಿದೆ. ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲೂ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು, ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಾರಾಯಣಗೌಡ, ಎಲ್ ಎನ್ ಟಿ ಮಂಜುನಾಥ್, ರಾಜಗೋಪಾಲ್, ಕೆ ಸತೀಶ್, ಡಾ ಎಚ್ ಎಮ್ ಸುಬ್ಬರಾಜು, ತಮ್ಮಯ್ಯ ಗೌಡ, ಮಹೇಶ್, ರಾಜಣ್ಣ, ಶಫಿ, ಪಿಡಿಒ ರವಿಕುಮಾರ್, ಆಶಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಕಸಬಾ ಹೋಬಳಿಯ ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು.
