Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಬಳ್ಳಾರಿಯಲ್ಲಿ ‘ಪಕ್ಕ ಲವರ್, ಚಿತ್ರದ ಟೈಟಲ್, ಆಡಿಯೋ ಲಾಂಚ್

Share

ಬಳ್ಳಾರಿ. ಸೆ. 14: ಸ್ಥಳೀಯ ಪ್ರತಿಭೆಗಳನ್ನೊಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡನ್ನು ನಗರದ ಪೋಲಾ ಪ್ಯಾರಡೈಸ್ ಹೋಟೆಲ್‌ನಲ್ಲಿ ಸೋಮವಾರದಂದು ಬಿಡುಗಡೆ ಮಾಡಲಾಯಿತು.

ಕೆಎಸ್‌ಆರ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕೋಳೂರು ರಾಜಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಾಣೇಶ್ ಚಿತ್ರವನ್ನು ನಿರ್ಮಿಸುತ್ತಿದ್ದು, ಅವಿನಾಶ್ ನಾಯಕನಾಗಿ ಹಾಗೂ ಅನುಷಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಚಿತ್ರ ನಿರ್ಮಾಣದಷ್ಟೇ ಪ್ರಮೋಷನ್ ಕೂಡ ಮುಖ್ಯ ಉತ್ತಮ ರೀತಿಯಲ್ಲಿ ಚಿತ್ರವನ್ನು ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿ ಚಿತ್ರತಂಡದ ಮೇಲಿದೆ ಎಂದರು.

ಬಳ್ಳಾರಿ ಭಾಗದ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಅಗತ್ಯವಿದೆ ಪ್ರತಿಭಾವಂತ ಕಲಾವಿದರು ಅವಕಾಶಕ್ಕಾಗಿ ಬೆಂಗಳೂರಿಗೆ ಅಥವಾ ಹೈದರಾಬಾದ್‌ಗೆ ತೆರಳುವ ಬದಲು ಸ್ಥಳೀಯವಾಗಿಯೇ ಅವರಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಬೇಕು ಎಂದರು.

ಚಿತ್ರದ ನಿರ್ದೇಶಕ ಕೋಳೂರು ರಾಜಶೇಖರ್ ಮಾತನಾಡಿ, ‘ಪಕ್ಕ

ಲವರ್ ಎಲ್ಲರಿಗೂ ತಮ್ಮದೇ ಕಥೆ ಎನ್ನುವ ಭಾವನೆ ಮೂಡಿಸುವಂತಹ ಯುವಕರ ಚಿತ್ರವಾಗಿದೆ. ಈಗಾಗಲೇ ಶೇ.30ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದರು.

ನಾಯಕ ಅವಿನಾಶ್ ಮಾತನಾಡಿ, ಚಿತ್ರರಂಗದಲ್ಲಿ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ್ದೇನೆ. ರಾಜಶೇಖರ್ ಅವರ ಕಥೆ ಇಷ್ಟವಾದ ಹಿನ್ನೆಲೆಯಲ್ಲಿ ‘ಪಕ್ಕ ಲವರ್’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರ ಯಶಸ್ವಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಚಿತ್ರಕ್ಕೆ ಸುಭಾಷ್ ಮತ್ತು ಸನ್ನಿ ನೃತ್ಯ ನಿರ್ದೇಶನ ಮತ್ತು ಛಾಯಾಗ್ರಹಣವಿದೆ. ಸ್ಥಳೀಯ ಪ್ರತಿಭೆಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಸಿಗುವ ನಿರೀಕ್ಷೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಪದವೀಧರ ವೇದಿಕೆಯ ರಾಜ್ಯಾಧ್ಯಕ್ಷ ಕೆಕೆ ಹಾಳ್ ಗೋವರ್ಧನ್ ಸೇರಿದಂತೆ ಇತರ ಕಲಾವಿದರು ಇದ್ದರು.

Written by

Bayalu Simha

Leave a Reply

Your email address will not be published. Required fields are marked *