ಚಿಕ್ಕಬಳ್ಳಾಪುರ: ಉರ್ದು ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾ ಹಿಸುವ ನಿಟ್ಟಿನಲ್ಲಿ ಅಂಜುಮನ್ ತರಖ್ಖಿ ಉರ್ದು (ಹಿಂದ್) ವತಿಯಿಂದ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ 217 ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ನಗರದ ಮದೀನಾ ಶಾದಿ ಮಹಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉರ್ದು ವಿಷಯದಲ್ಲಿ ಶೇ.100 ಅಂಕ ಗಳಿಸಿದ ಜಿಲ್ಲೆಯ ಎಂಟು ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕರ್ನಾಟಕ ಅಂಜುಮನ್ ತರಖ್ಖಿ ಉರ್ದು (ಹಿಂದ್)
ರಾಜ್ಯಾಧ್ಯಕ್ಷ ಒಬೇದ್ ಉಲ್ಲಾ ಶರೀಫ್ ಮಾತನಾಡಿ,
ಉರ್ದು ಭಾಷೆಯ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ ಅಂಜುಮನ್ ನಿರಂತರವಾಗಿ ಶ್ರಮಿಸುತ್ತಿದೆ. ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉರ್ದು ವಿಷಯದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಅಂಜುಮನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಮುಬೀನ್ ಮುನವ್ವರ್ ಮಾತನಾಡಿ, ಉರ್ದುವನ್ನು ಕೇವಲ ಮಾತೃಭಾಷೆ ಎಂದು ಪರಿಗಣಿಸದೆ ತಾಯಿಯನ್ನು ಪ್ರೀತಿಸಿ ಗೌರವಿಸುವಂತೆ ಭಾಷೆಯನ್ನೂ ಪ್ರೀತಿಸಿ ಬೆಳೆಸಬೇಕು. ಹೊಸ ಪೀಳಿಗೆಗೆ ಉರ್ದು ಭಾಷೆಯ ಪರಿಚಯ ಮಾಡಿಸುವುದರ ಜತೆಗೆ ಭಾಷೆಯ ಬಗ್ಗೆ ಪ್ರೀತಿ ಮತ್ತು ಅಭಿಮಾನ ಮೂಡಿಸುವುದು ಅಂಜುಮನ್‌ನ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ದಾರುಲ್ ಉಲೂಮ್ ಸಬೀಲುರ್ ರಶಾದ್‌ನ ಮುಹ್ತಮಿಮ್ ಮೌಲಾನಾ ಮುಫ್ತಿ ಅಹ್ಮದ್ ಶಮಾಲ್ ರಶಾದಿ ವಹಿಸಿದ್ದರು.
ಅಂಜುಮನ್ ತರಖ್ಖಿ ಉರ್ದು ಹಿಂದ್ ರಾಜ್ಯ ಉಪಾಧ್ಯಕ್ಷ ಇಜಾಜ್ ಅಲಿ,ಫರೀದ ರಹ ಮತ್ ಉಲ್ಲಾ, ಅಬ್ದುಲ್ ಖಾಲಖ್ ,ಜಿಲ್ಲಾಧ್ಯಕ್ಷ ಇಮ್ತಿಯಜ್ ಉಲ್ಲಾ ಕಾಶಿಫಿ,ಕಾರ್ಯದರ್ಶಿ ಮೊಹಮ್ಮದ್ ಜೀಲಾನಿ,ಜಮಾಅತ್ ಅಹ್ಲೆ ಇಸ್ಲಾಂ ಕಾರ್ಯದರ್ಶಿ ಮೌಲಾನಾ ಫಹದ್,ಅನ್ಸಾರ್ ಅಜೀಜ್ ನದ್ವಿ, ಮೀರ್ ಜಾರಾರ್ ಹುಸೇನ್,ಶಫೀವುಲ್ಲಾ,
ಸಯ್ಯದ್ ಅಮಾನುಲ್ಲಾ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ಶಿಕ್ಷಕಿಯರು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.( ಮುಬಷೀರ್ ಅಹಮದ್ )
ಉರ್ದು ಭಾಷೆ ಬೆಳೆಸುವ ಜವಾಬ್ದಾರಿ ಹೊಸ ಪೀಳಿಗೆಯ ಮೇಲಿದೆ: ಮಹಮ್ಮದ್ ಒಬೇದ್ ಉಲ್ಲಾ ಶರೀಫ್
