ಚಿಕ್ಕಬಳ್ಳಾಪುರ: ಅಂಜುಮನ್ ತರಖ್ಖಿ ಉರ್ದು(ಹಿಂದ್) ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನಗರದ ಮದೀನಾ ಶಾದಿ ಮಹಲ್‌ನಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಉರ್ದು ವಿಷಯದಲ್ಲಿ ಶೇ.100 ಅಂಕ ಗಳಿಸಿದ ಜಿಲ್ಲೆಯ ಎಂಟು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 217 ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಅಂಜುಮನ್ ತರಖ್ಖಿ ಉರ್ದು (ಹಿಂದ್) ರಾಜ್ಯಾಧ್ಯಕ್ಷ ಮಹಮ್ಮದ್ ಒಬೇದ್ ಉಲ್ಲಾ ಶರೀಫ್ ಮಾತನಾಡಿ,ಉರ್ದು ಭಾಷೆಯ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಅಂಜುಮನ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉರ್ದು ಭಾಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಅಂಜುಮನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಮುಬೀನ್ ಮುನವ್ವರ್ ಮಾತನಾಡಿ, ಉರ್ದುವನ್ನು ಕೇವಲ ಮಾತೃಭಾಷೆ ಎಂದು ಹೇಳಿದರೆ ಸಾಲದು ತಾಯಿಯನ್ನು ಹೇಗೆ ಪ್ರೀತಿಸಿ ಗೌರವಿಸುತ್ತೇವೆಯೋ ಅದೇ ರೀತಿ ಉರ್ದು ಭಾಷೆಯನ್ನೂ ಪ್ರೀತಿಸಿ ಬೆಳೆಸಬೇಕು.
ಹೊಸ ಪೀಳಿಗೆಗೆ ಉರ್ದು ಭಾಷೆಯ ಪರಿಚಯ ಮಾಡಿಸುವುದರ ಜತೆಗೆ ಭಾಷೆಯ ಬಗ್ಗೆ ಪ್ರೀತಿ ಮತ್ತು ಅಭಿಮಾನ ಮೂಡಿಸಲು ಅಂಜುಮನ್ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಬೆಂಗಳೂರಿನ ದಾರುಲ್ ಉಲೂಮ್ ಸಬೀಲುರ್ ರಶಾದ್‌ನ ಮುಹ್ತಮಿಮ್ ಮೌಲಾನಾ ಮುಫ್ತಿ ಅಹ್ಮದ್ ಶಮಾಲ್ ರಶಾದಿ ವಹಿಸಿದ್ದರು.
ಅಂಜುಮನ್ ತರಖ್ಖಿ ಉರ್ದು ಹಿಂದ್ ರಾಜ್ಯ ಉಪಾಧ್ಯಕ್ಷ ಇಜಾಜ್ ಅಲಿ,ಫರೀದ ರಹ ಮತ್ ಉಲ್ಲಾ, ಅಬ್ದುಲ್ ಖಾಲಖ್ ,ಜಿಲ್ಲಾಧ್ಯಕ್ಷ ಇಮ್ತಿಯಜ್ ಉಲ್ಲಾ ಕಾಶಿಫಿ,ಕಾರ್ಯದರ್ಶಿ ಮೊಹಮ್ಮದ್ ಜೀಲಾನಿ,ಜಮಾಅತ್ ಅಹ್ಲೆ ಇಸ್ಲಾಂ ಕಾರ್ಯದರ್ಶಿ ಮೌಲಾನಾ ಫಹದ್,ಅನ್ಸಾರ್ ಅಜೀಜ್ ನದ್ವಿ, ಮೀರ್ ಜಾರಾರ್ ಹುಸೇನ್,ಶಫೀವುಲ್ಲಾ,
ಸಯ್ಯದ್ ಅಮಾನುಲ್ಲಾ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ಶಿಕ್ಷಕಿಯರು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.( ಮುಬಷೀರ್ ಅಹಮದ್ )
ಉರ್ದು ಭಾಷೆ ಬೆಳೆಸುವ ಜವಾಬ್ದಾರಿ ಹೊಸ ಪೀಳಿಗೆಯ ಮೇಲಿದೆ: ಮಹಮ್ಮದ್
