ಪೀಣ್ಯ ದಾಸರಹಳ್ಳಿ : 60 ಸಾಧಕರಿಗೆ ‘ವಿಶ್ವ ಕನ್ನಡ ಅಕ್ಷರ ರತ್ನ’ ಪ್ರಶಸ್ತಿ; 12 ಮಕ್ಕಳಿಂದ ವಚನ ಗಾಯನ–ತಾತ್ಪರ್ಯ; ಎರಡು ಕೃತಿಗಳು ಬಿಡುಗಡೆ ಮಾಡಿದ್ದೇವೆ ಎಂದು ಕಾದಂಬರಿಕಾರರು, ಲೇಖಕಿ ಸಿ ನಂದಿನಿ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹಾವನೂರು ಬಡಾವಣೆಯ ಹತ್ತಿರವಿರುವ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜ್ ಸಭಾಂಗಣದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ. ರವೀಶ ಅಕ್ಕರ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಅಂತರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಮೂಲಕ ಕಾರ್ಯಕ್ರಮಕ್ಕೆ ಸಮ್ಮೇಳನದ ಅಧ್ಯಕ್ಷೆ ಸಿ. ನಂದಿನಿ ಅವರು ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ 12 ಮಕ್ಕಳು ತಲಾ ಒಂದೊಂದು ವಚನವನ್ನು ಗಾಯನದ ಮೂಲಕ ಪ್ರಸ್ತುತಪಡಿಸಿ, ಅದರ ಅರ್ಥ–ತಾತ್ಪರ್ಯವನ್ನು ವಿವರಿಸಿದ್ದು ನಮ್ಮೇಲ್ಲರಿ ಖುಷಿ ತಂದಿದೆ ಎಂದು ಸಾಹಿತಿ ಗಳನ್ನು ಉದ್ದೇಶಿಸಿ ಸಿ ನಂದಿನಿ ಮಾತನಾಡಿದರು.
ಖ್ಯಾತ ಕವಿ ವೈ.ಬಿ.ಎಚ್. ಜಯದೇವ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 25 ಕವಿಗಳು ಕವನ ವಾಚಿಸಿದರು. ಕವಿತೆಯ ವಸ್ತು, ಭಾಷೆ, ಭಾವ ಹಾಗೂ ಅಭಿವ್ಯಕ್ತಿಯ ಕುರಿತು ಮಾರ್ಗದರ್ಶನ ನೀಡಿದ ಅವರು, ಕವಿತೆ ಕೇವಲ ಪದಗಳ ಜೋಡಣೆಯಾಗದೆ ಸಮಾಜದ ನೋವು–ನಲಿವು ಮತ್ತು ಬದುಕಿನ ವಾಸ್ತವವನ್ನು ಪ್ರತಿಬಿಂಬಿಸುವಂತಿರಬೇಕು ಎಂದು ವೈ.ಬಿ.ಎಚ್ ಜಯದೇವ್ ಸಲಹೆ ನೀಡಿದರು.
ಪ್ರಾಂಶುಪಾಲ ಚೆನ್ನೇಗೌಡ ಎಂ.ಎನ್. ವಚನ ಸಾಹಿತ್ಯದ ಮಹತ್ವ ಹಾಗೂ ಶರಣರ ಚಿಂತನೆಗಳ ಕುರಿತು ಮಕ್ಕಳಿಗೆ ವಿವರಿಸಿದರು.
ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ. ರವೀಶ ಅಕ್ಕರ ಸರ್ವರಿಗೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಅವರು ಸಂಸ್ಥೆಯು ಕಳೆದ ಏಳು ವರ್ಷಗಳಿಂದ ಕನ್ನಡ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 60 ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನ ಎಂ.ಎನ್. ಉಮೇಶ್ ಕುಮಾರ್ ಮಾತನಾಡಿ, ಮಕ್ಕಳಿಗೆ ವಚನಗಳನ್ನು ಕಲಿಸುವ ಮೂಲಕ ಕನ್ನಡ ಸಾಹಿತ್ಯ ಮತ್ತು ಶರಣರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ, ಡಾ. ಸಿ. ಸೋಮಶೇಖರ್,ಸಿದ್ದರಾಮ ಇ ಬಿರಾದಾರ್, ಜೆ. ಮಂಜುನಾಥ್, ಬಿ.ಟಿ. ಸವಿತಾ, ಗೌರವಾಧ್ಯಕ್ಷ ಡಾ. ಶಫಿವುಲ್ಲಾ, ಬಿ ವಿಜಯಕುಮಾರ್, ಶ್ರೀಮತಿ ಪವಿತ್ರ ಎಂ.ವಿ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿನಾಯಕ ಆರ್.ಜಿ ಸೇರಿದಂತೆ ವಿಶ್ವ ಕನ್ನಡ ಕಲಾ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು, ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನ ಸಿಬ್ಬಂದಿ ವರ್ಗದವರು ಪೋಷಕರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
