ಕೆ.ಆರ್. ಪುರ, ಸೆ.25- ಕೆರೆಗಳು ನಮ್ಮ ಪೂರ್ವಜರು ನೀಡಿರುವ ಬಳುವಳಿಯಾಗಿದ್ದು, ಅವುಗಳ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಕೆಆರ್ ಪುರದ ಕೆರೆ ಅಂಗಳದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲು ಅವುಗಳ ಉಳಿವು ಅಗತ್ಯ,ನಮ್ಮ ಕ್ಷೇತ್ರದ ಕೆರೆಗಳ ಪುನಶ್ಚತನಕ್ಕೆ ಒತ್ತು ನೀಡುತ್ತಾ ಬರುತ್ತಿದ್ದೇನೆ ಎಂದರು.
ಕೆ.ಆರ್.ಪುರ ಕೆರೆ ನಮ್ಮ ಕ್ಷೇತ್ರಕ್ಕೆ ಪ್ರಮುಖ ಕೇಂದ್ರ ಬಿಂದುವಾಗಿದ್ದು, ಈ ಕೆರೆಯನ್ನ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದ್ದು,ಸಾರ್ವಜನಿಕರ ಅನುಕೂಲಕ್ಕೆ ಒಪನ್ ಜಿಮ್ ಮತ್ತು ಮಕ್ಕಳ ಆಟದ ಮೈದಾನ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಮೂರು ಕೋಟಿ ಅನುದಾನದಲ್ಲಿ ನಿರ್ಮಾಣವಾಗಿತ್ತಿರುವ ಈ ಓಪನ್ ಜಿಮ್ ನಲ್ಲಿ ಸಾರ್ವಜನಿಕರು ಉಚಿತವಾಗಿ ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಗುಣಮಟ್ಟದ ಜಿಮ್ ಉಪಕರಣಗಳನ್ನು ಅಳವಡಿಸಲಾಗುತ್ತದೆ.ಬೆಳಿಗ್ಗೆ ಮತ್ತು ಸಂಜೆ ನಡಿಗೆಗಾಗಿ ಸ್ವಚ್ಛವಾದ ಹಾದಿ ಇರುತ್ತದೆ.ಗಿಡ-ಮರಗಳು ಮತ್ತು ಹಸಿರಿನ ವಾತಾವರಣವಿರುತ್ತದೆ.ಹಾಗೂ ಮಕ್ಕಳಿಗೆ ಜಾರುವೆಂಡೆ , ಜೋಕಾಲಿ ಮತ್ತು ಸುರಕ್ಷಿತ ಆಟಿಕೆಗಳು ಇರುತ್ತವೆ ಎಂದು ತಿಳಿಸಿದರು.
ಕೆರೆ ಅಂಗಳದಲ್ಲಿ ಅಭಿವೃದ್ಧಿ ಕೆಲಸ ಮಾಡಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿಯನ್ನ ಎಲ್ಲರೂ ಸೇರಿ ಮಾಡಬೇಕು, ನಮ್ಮ ಮನೆ ರೀತಿ ಕೆರೆ ಅಂಗಳವನ್ನು ಸ್ವಚ್ಛ ವಾಗಿಟ್ಟು ಕೊಳ್ಳಬೇಕು ಎಂದು ತಿಳಿದರು.
ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ವಾರ್ಡ್ ಅಧ್ಯಕ್ಷ ಶಿವಪ್ಪ, ಮುಖಂಡರಾದ ಪಟಾಕಿ ರವಿ, ಮಾಜಿ ಸೈನಿಕ ಶಿವಪ್ಪ, ಕೆ.ಪಿ.ಕೃಷ್ಣ ಮೋಹನ್, ಜೆಸಿಬಿ ಆಂತೋಣಿ, ವೆಂಗಯ್ಯನ ಕೆರೆ ಅಭಿವೃದ್ಧಿ ವೊರಿಯರ್ಸ್ ತಂಡ ಮುಂತಾದವರು ಹಾಜರಿದ್ದರು.
