Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಕೆಜಿಎಫ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ಸಿ.ಎನ್.ಗಿರೀಶ್ ಗೌಡ ಹೇಳಿದರು.

Share

 

ಬಂಗಾರಪೇಟೆ;ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ಪೂರೈಸುವ ಮೂಲಕ ಸಂಘದ ಅಭಿವೃದ್ಧಿ ಹಾಗೂ ತಮ್ಮ ಆರ್ಥಿಕ ಪ್ರಗತಿಗೆ ಸಹಕರಿಸಬೇಕು ಎಂದು ಕೋಲಾರ ಹಾಲು ಒಕ್ಕೂಟದ ಕೆಜಿಎಫ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ಸಿ.ಎನ್.ಗಿರೀಶ್ ಗೌಡ ಹೇಳಿದರು.

ತಾಲೂಕಿನ ದೊಡ್ಡಬೊಂಪಲ್ಲಿ ಗ್ರಾಮದ ಹಾಲು ಉತ್ಪಾ ದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ 2025 -26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ನಿರ ಂತರವಾಗಿ ಸಂಘಕ್ಕೆ ಪೂರೈಸಿದರೆ ಒಕ್ಕೂಟದ ಮೂಲಕ ದೊರೆಯುವ ವಿವಿಧ ಸೌಲಭ್ಯ ಹಾಗೂ ಪ್ರೋತ್ಸಾಹಧ ನಗಳನ್ನು ಪಡೆಯಲು ಅನುಕೂಲವಾಗಲಿದೆ. ಹೈನುಗಾ ರಿಕೆಯನ್ನು ಕೇವಲ ಉಪಕಸುಬಾಗಿ ಪರಿಗಣಿಸದೆ ವೈಜ್ಞಾ ನಿಕವಾಗಿ ಕೈಗೊಂಡರೆ ಕುಟುಂಬದ ಆದಾಯ ಹೆಚ್ಚಿಸಿ ಕೊಳ್ಳಬಹುದು ಎಂದರು.

ಹಸುಗಳಿಗೆ ಸಮತೋಲಿತ ಪೌಷ್ಟಿಕ ಆಹಾರ ನೀಡು ವುದು, ಕಾಲಕಾಲಕ್ಕೆ ಪಶುವೈದ್ಯಕೀಯ ತಪಾಸಣೆ ಹಾಗೂ ಲಸಿಕೆ ಕೊಡಿಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದರು. ಸಂಘವು ಪ್ರಸಕ್ತ ಸಾಲಿನಲ್ಲಿ ₹7,84,955 ನಿವ್ವಳ ಲಾಭ ಗಳಿಸಿದೆ. ಸಂಘದಲ್ಲಿ ₹100 ಮೌಲ್ಯದ ಹಾಲು ವ್ಯವಹಾರ ಮಾಡಿದ ರೈತರಿಗೆ ₹1.89 ಬೋನಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹರೀಶ್ ರೆಡ್ಡಿ, ಉಪಾಧ್ಯಕ್ಷ ವಿಜಯ ಕುಮಾರ್ ರೆಡ್ಡಿ, ವಿಸ್ತರಣಾಧಿಕಾರಿ ಸಿ.ಎನ್. ಸದಾ ಶಿವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗ ರಾಜ್ ಗೌಡ, ನಿರ್ದೇಶಕರಾದ ಶ್ರೀನಿವಾಸ್, ಶ್ರೀರಾಮ ರೆಡ್ಡಿ, ಶಂಕರಾಚಾರಿ, ಕೃಷ್ಣಾರೆಡ್ಡಿ, ಗೋವಿಂದ ರೆಡ್ಡಿ, ಮಂಜುನಾಥ, ಕೃಷ್ಣಗೌಡ, ರಾಮಚಂದ್ರಪ್ಪ, ಸುಮಿ ತಮ್ಮ, ಜಯಲಕ್ಷ್ಮಮ್ಮ ಸೇರಿದಂತೆ ಮತ್ತಿತರರು ಇದ್ದರು

Written by

Bayalu Simha

Leave a Reply

Your email address will not be published. Required fields are marked *