Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಳ್ಳಾರಿಯ ಹಿರಿಯ ಕರಾಟೆ ತರಬೇತುದಾರ ಕಟ್ಟೇಸ್ವಾಮಿ ಆಯ್ಕೆ

Share

ಬಳ್ಳಾರಿ: ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಳ್ಳಾರಿಯ ಖ್ಯಾತ ಹಿರಿಯ ಕರಾಟೆ ತರಬೇತುದಾರರಾದ ಕಟ್ಟೇಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಆಗಸ್ಟ್ ತಿಂಗಳಲ್ಲಿ ಉಡುಪಿಯಲ್ಲಿ ನಡೆದ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಟ್ಟೇಸ್ವಾಮಿ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಇದರ ಅಂಗವಾಗಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರಾಟೆ ತರಬೇತುದಾರರ ಏಳಿಗೆ ಹಾಗೂ ಕರಾಟೆ ಕ್ರೀಡೆಯ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಸಂಘ ಹೊಂದಿದೆ. ವಿಶೇಷವಾಗಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, ವಸತಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸರ್ಕಾರಿ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕರಾಟೆ ತರಬೇತಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು, ತರಬೇತುದಾರರಿಗೆ ಉತ್ತೇಜನ ನೀಡುವುದು ಹಾಗೂ ರಾಜ್ಯದಲ್ಲಿ ಕರಾಟೆ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸಲಿದೆ.

ನೂತನ ಪದಾಧಿಕಾರಿಗಳು:

* ಚೇರ್ಮನ್: ಪ್ರವೀಣ್ ರಂಕ, ಬೆಂಗಳೂರು
* ಗೌರವ ಅಧ್ಯಕ್ಷರು: ಲಕ್ಷ್ಮೀನಾರಾಯಣ ಆಚಾರ್, ಉಡುಪಿ
* ರಾಜ್ಯ ಅಧ್ಯಕ್ಷರು: ಮಹಮ್ಮದ್ ನದೀಮ್, ಮಂಗಳೂರು
* ರಾಜ್ಯ ಪ್ರಧಾನ ಕಾರ್ಯದರ್ಶಿ: ಕಟ್ಟೇಸ್ವಾಮಿ, ಬಳ್ಳಾರಿ
* ಖಜಾಂಚಿ: ಶಿವಕುಮಾರ್ ಶಾರದಳ್ಳಿ, ವಿಜಯಪುರ
* ರಾಜ್ಯ ಉಪಾಧ್ಯಕ್ಷರು: ಸತೀಶ್ ಬೆಲ್ಮಣ್ಣು, ಉಡುಪಿ; ವಿಶಾಲ್, ಕಾರವಾರ; ಸುಂದರಂ, ಬೆಂಗಳೂರು
* ಸಹ ಕಾರ್ಯದರ್ಶಿ: ಪ್ರಕಾಶ್ ಉಜನಿ ಕೊಪ್ಪ, ಹಾವೇರಿ
* ರಾಜ್ಯ ವಕ್ತಾರ: ಮೌನೇಶ್ ವಡ್ಡಟ್ಟಿ, ಕೊಪ್ಪಳ
* ಸಂಘಟನಾ ಕಾರ್ಯದರ್ಶಿ: ರೋಹಿತಕ್ಷ್ಯ, ಉಡುಪಿ
* ಕ್ರೀಡಾ ಕಾರ್ಯದರ್ಶಿಗಳು: ಸರ್ಫರಾಜ್, ಮಂಗಳೂರು; ಸುಭಾಷ್ ಚಂದ್ರ ಎಂ., ವಿಜಯನಗರ
* ಕಾರ್ಯಕಾರಿಣಿ ಸದಸ್ಯರು: ಅಬ್ದುಲ್ ರೆಹಮಾನ್ ಸೇರಿದಂತೆ ಇತರರು

ರಾಜ್ಯದಲ್ಲಿ ಕರಾಟೆ ಕ್ರೀಡೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಕರಾಟೆ ತರಬೇತುದಾರರು ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘವು ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಮಹಮ್ಮದ್ ನದೀಮ್, ಮಂಗಳೂರು ಅವರು ತಿಳಿಸಿದ್ದಾರೆ

Written by

Bayalu Simha

Leave a Reply

Your email address will not be published. Required fields are marked *