Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ದೊಡ್ಡೂರು ಹಾಲು ಉತ್ಪಾದಕರ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ.

Share

ಬಂಗಾರಪೇಟೆ: ತಾಲೂಕಿನ ದೊಡ್ಡೂರು ಹಾಲು ಉತ್ಪಾದಕರ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 1,63,962.87 ನಿವಳ ಲಾಭ ಗಳಿಸಿದೆ ಎಂದು ಬಂಗಾರಪೇಟೆ ಶಿಬಿರದ ಉಪ ವ್ಯವಸ್ಥಾಪಕ ಎಂ ಅಮರೇಶ್ ತಿಳಿಸಿದರು.

ದೊಡ್ಡೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ ಅಪದನ ನಿಧಿ-1,63,962.87 ಕಟ್ಟಡ ನಿಧಿ -49,188.00 ಸದಸ್ಯರ ಶೇರು ಡಿವಿಡೆಂಡ್ -818.00 ಸಹಕಾರ ಶಿಕ್ಷಣ ನಿಧಿ -9,837.00 ಉತ್ಪಾದಕರ ಬೋನಸ್- 43, 205.00 ದಾನ ಧರ್ಮದ ನಿಧಿ-43,205.00 ರಾಸು ಅಭಿವೃದ್ಧಿ ನಿಧಿ -21,602.00 ಸಹಕಾರ ಪ್ರಚಾರ ನಿಧಿ- 21, 602.00 ಸಿಬ್ಬಂದಿ ವಿಮಾನಿಧಿ-21,602.00 ಒಟ್ಟು=6,55,850.87 ಉತ್ಪಾದಕರ ಬೋನಸ್ -2,80,829.00 ಸಿಬ್ಬಂದಿ ಬೋನಸ್ -43,205.00 ಹಾಲು ಖರೀದಿ -1,50,24,288.31 ಹಾಗೂ ಸಂಘದ ಹಾಲು ಉತ್ಪಾದಕರಿಗೆ ರೂ100ಕ್ಕೆ ಶೇ=1.86% ಬೋನಸ್ ನೀಡಲಾಗಿದೆ ಎಂದರು.

ಸಂಘದ ವತಿಯಿಂದ ಹಾಲು ಉತ್ಪಾದಕರಿಗೆ ಸಮಯಕ್ಕೆ ಸರಿಯಾಗಿ ಹಾಲಿನ ಹಣ ಪಾವತಿ ಮಾಡುವುದರ ಜೊತೆಗೆ, ಸದಸ್ಯರ ಹಿತದೃಷ್ಟಿಯಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಘದ ಸದಸ್ಯರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಸಂಘಕ್ಕೆ ಪೂರೈಸುತ್ತಿರುವುದರಿಂದ ಸಂಘದ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಹಾಲು ಉತ್ಪಾದಕರಿಗೆ ಸಹಕಾರ ಸಂಘಗಳು ಆರ್ಥಿಕವಾಗಿ ನೆರವಾಗುವ ಪ್ರಮುಖ ವೇದಿಕೆಯಾಗಿದ್ದು, ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಘದ 2025-26ನೇ ಸಾಲಿನ ಆದಾಯ-ವೆಚ್ಚ, ಲಾಭ-ನಷ್ಟ ಹಾಗೂ ಮುಂದಿನ ಸಾಲಿನ ಕಾರ್ಯಯೋಜನೆ ಕುರಿತು ಚರ್ಚೆ ನಡೆಯಿತು. ಸಂಘದ ಲಾಭದಾಯಕ ಸ್ಥಿತಿ ಮುಂದುವರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸದಸ್ಯರಿಂದ ಸಲಹೆಗಳನ್ನು ಪಡೆಯಲಾಯಿತು.

ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ವೆಂಕಟೇಶಪ್ಪ, ಉಪಾಧ್ಯಕ್ಷ ಎನ್. ಕೃಷ್ಣಪ್ಪ, ನಿರ್ದೇಶಕ ವಿ.ಸುರೇಶ್, ಕೆ. ಸುರೇಶ್,ಸಿ.ಕೃಷ್ಣಪ್ಪ, ಡಿ.ಎಸ್. ಪ್ರಕಾಶ್, ಟಿ.ರವಿಕುಮಾರ್, ಎನ್.ಚಲಪತಿ, ಜೆ.ಮಂಜುನಾಥ, ವಿ.ಸಿ. ಕುಮಾರ್, ನೀಲಮ್ಮ, ಶಾಂತಮ್ಮ, ನಾರಾಯಣಮ್ಮ, ಹಾಗೂ ಮುಖ್ಯ ಕಾರ್ಯನಿರ್ವಾಹಕ ಎನ್. ವಿಜಯಕುಮಾರ್,ಹಾಲು ಪರೀಕ್ಷಕ ಕೆ.ನಾರಾಯಣಸ್ವಾಮಿ ಸಹಾಯಕರಾದ ಎಂ.ಸುಗುಣ ಆರ್.ರಮೇಶ್ ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು.

Written by

Bayalu Simha

Leave a Reply

Your email address will not be published. Required fields are marked *