ಪೀಣ್ಯ ದಾಸರಹಳ್ಳಿ: ಸಮೀಪದ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿಯ ನಾಡ ಪ್ರಭು ಕೆಂಪೆಗೌಡ ಪುತ್ಥಳಿ ಹತ್ತಿರದಲ್ಲಿರುವ ರಾಮ ಡೆಲಿಕೆಸಿ ಹೋಟೆಲ್ ಹಾಲಿನಲ್ಲಿ ಕಾಂಗ್ರೆಸ್ ನಿಕಟಪೂರ್ವ ಮಹಿಳಾ ಅಧ್ಯಕ್ಷೆ.
ಶೃತಿ ಗೌಡರ ಹುಟ್ಟು ಹಬ್ಬವನ್ನು ಕೆಪಿಸಿಸಿ ಎಸ್ ಟಿ. ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಂದ್ರಹಳ್ಳಿ ವಾರ್ಡಿನ ಕಾಂಗ್ರೆಸ್ ಜಿಬಿಎ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ವಿ. ನಾಗರಾಜ್ ಅವರ ನೇತೃತ್ವದಲ್ಲಿ ಶೃತಿ ಗೌಡರ ಹುಟ್ಟು ಹಬ್ಬ ಆಯೋಜಿಸಲಾಗಿತ್ತು. ಶೃತಿ ಗೌಡರಿಗೆ ಶುಭ ಕೋರಿ ಮಾತನಾಡಿದ ವಿ. ನಾಗರಾಜ್ ಹಿಂದೂ ಸಂಪ್ರದಾಯದ ಪ್ರಕಾರ ಹಾಗೂ ಭಾರತೀಯ ಸಂಸ್ಕೃತಿಯ ಪರಂಪರೆಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ವಿನೂತನವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ಶೃತಿ ಗೌಡರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಕೋರಿ ನೆರೆದಿದ್ದ ಜನರನ್ನು ಉದ್ದೇಶಿಸಿ ವಿ. ನಾಗರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು, ನಾಡ ಪ್ರಭು ಕೆಂಪೆಗೌಡ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಕುಮಾರ್, ಯುವ ಅಧ್ಯಕ್ಷ ಅರುಣ್ ಬೈಲಪ್ಪ, ನಿತೀಶ್ ,ಮಾರೇಗೌಡ, ಗಿರೀಶ್, ಹೊಸಹಳ್ಳಿ ಸತೀಶ್, ರವಿ,ಸುಭಾಷ್, ಕಸ್ತೂರಿ ಮಂಜು, ಮಹಿಳೆಯರಾದ ಗಿರಿಜಾ, ದಾಕ್ಷಾಯಿಣಿ, ಧನಲಕ್ಷ್ಮಿ, ಕವಿತಾ ಸೇರಿದಂತೆ ಶೃತಿ ಗೌಡರ ಅಪಾರ ಅಭಿಮಾನಿಗಳು ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
