Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಶ್ರೀ ವಾಲ್ಮೀಕಿನಗರದಲ್ಲಿ ಗಣೇಶೋತ್ಸವ: ಪ್ರಕಾಶ್ ಟಿ ರವರ ನೇತೃತ್ವದಲ್ಲಿ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ

Share

ಪೀಣ್ಯ ದಾಸರಹಳ್ಳಿ : ಮಾಜಿ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಕೃಪಾಕಟಾಕ್ಷ ಮಾರ್ಗದರ್ಶನ ಮತ್ತು ಸಹಕಾರದಿಂದ ಅಂದ್ರಹಳ್ಳಿ ವಾರ್ಡಿನ ಶ್ರೀ ವಾಲ್ಮೀಕಿನಗರದ ವಾಲ್ಮೀಕಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಶ್ರೀ ವಾಲ್ಮೀಕಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಹಾಗೂ ಅಂದ್ರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ತೋಪಯ್ಯ ಅವರ ಮಾರ್ಗದರ್ಶನದಲ್ಲಿ, ಅಂದ್ರಹಳ್ಳಿ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಆಕಾಂಕ್ಷಿ ಅಭ್ಯರ್ಥಿ ಪ್ರಕಾಶ್ ಟಿ. ಅವರ ನೇತೃತ್ವದಲ್ಲಿ 8ನೇ ವರ್ಷದ ವಿಜೃಂಭಣೆಯಿಂದ ಶ್ರೀ ವಿನಾಯಕ ವಾರ್ಷಿಕೋತ್ಸವ ಅಂಗವಾಗಿ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.


ಅಂದ್ರಹಳ್ಳಿಯ ಎಸ್‌ಎಲ್‌ವಿ ಆಸ್ಪತ್ರೆ ಹಾಗೂ ಯಶವಂತಪುರದ ಸ್ಪರ್ಶ ಆಸ್ಪತ್ರೆ ಸಹಕಾರದೊಂದಿಗೆ ನಡೆದ ಆರೋಗ್ಯ ಶಿಬಿರದಲ್ಲಿ ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಕೂಲಿ ಕಾರ್ಮಿಕರು ಬೃಹತ್ ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ಹೃದಯ ಸಂಬಂಧಿತ ಕಾಯಿಲೆಗಳು ಹಾಗೂ ಸ್ತ್ರೀರೋಗ ಸಂಬಂಧಿತ ಸಮಸ್ಯೆಗಳ ತಪಾಸಣೆ ನಡೆಸಲಾಯಿತು. ಆರೋಗ್ಯ ಸಮಸ್ಯೆ ಕಂಡುಬಂದವರಿಗೆ ವೈದ್ಯರ ಸಲಹೆಯೊಂದಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.
ಇದೇ ವೇಳೆ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಹಲವಾರು ಮಂದಿ ರಕ್ತದಾನ ಮಾಡಿ ಮಾನವೀಯತೆ ತೋರಿಸಿಕೊಟ್ಟರು.
ಶಿಬಿರದಲ್ಲಿ ಎಸ್‌ಎಲ್‌ವಿ ಆಸ್ಪತ್ರೆಯ ಹೃದಯ ತಜ್ಞರಾದ ಡಾ. ಆನಂದ್ ಕುಮಾರ್ ಎಂ., ಸಾಮಾನ್ಯ ವೈದ್ಯರಾದ ಬಾಲಚಂದ್ರ, ಸ್ತ್ರೀರೋಗ ತಜ್ಞರಾದ ದೀಪ್ತಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳಾದ ಕೀರ್ತಿ, ಮೇಘನಾ, ರಮ್ಯಾ, ದೀಪಿಕಾ, ಮಂಜುನಾಥ್, ಪ್ರತಿನಿಧಿ ಮಂಜುನಾಥ್, ನಾಗು ಹಾಗೂ ಶರಣ್ಯ ಅವರು ಆರೋಗ್ಯ ತಪಾಸಣಾ ಸೇವೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂದ್ರಹಳ್ಳಿ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಮುಖಂಡ ಬೈಲಪ್ಪ ವಾರ್ಡಿನ ಮಹಿಳಾ ಅಧ್ಯಕ್ಷೆ ಜಲಜಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಶಿಬಿರ ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಟಿ, “ಇಂದಿನ ಒತ್ತಡದ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಬಿಪಿ, ಶುಗರ್, ಇಸಿಜಿ, ಹೃದಯ ಸಂಬಂಧಿತ ಹಾಗೂ ಸ್ತ್ರೀರೋಗ ಸಮಸ್ಯೆಗಳ ತಪಾಸಣೆಯ ಜೊತೆಗೆ ಅಗತ್ಯವಿರುವವರಿಗೆ ಉಚಿತವಾಗಿ ಔಷಧಿ ವಿತರಿಸಿರುವುದು ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಸ್ವಯಂಪ್ರೇರಿತ ರಕ್ತದಾನ ಶಿಬಿರವೂ ಉತ್ತಮ ಸಮಾಜಮುಖಿ ಕಾರ್ಯವಾಗಿದೆ. ಈ ರೀತಿಯ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ನಮ್ಮ ನಾಯಕರು ಕ್ಷೇತ್ರದ ಶಾಸಕರಾದ ಎಸ್.ಟಿ. ಸೋಮಶೇಖರ್ ಗೌಡರು ಸದಾ ಪ್ರೋತ್ಸಾಹ ನೀಡುತ್ತಾ, ಜನರ ಆರೋಗ್ಯ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಾರ್ವಜನಿಕರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು”, ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘ ಅಧ್ಯಕ್ಷ ಬಸವರಾಜ ನಾಯಕ್, ಖಜಾಂಚಿ ರಾಜು ಬಿ.ಎಂ., ಶಿವಮೂರ್ತಿ ಜಿ., ಸಂತೋಷ್ ಸಿ.ಎಂ., ಕೃಷ್ಣಮೂರ್ತಿ ಡಿ.ಎನ್., ಶ್ರೀನಿವಾಸ್, ನಾಗರಾಜ್, ರವಿಕುಮಾರ್, ಪಾಪು, ಗಂಗರಾಜು, ಶೋಭಾ, ರತ್ನಮ್ಮ, ಸೌಮ್ಯ, ಪುಷ್ಪ, ಮಂಜಮ್ಮ, ಸುಧಾ ಸೇರಿದಂತೆ ಸಂಘದ ಸದಸ್ಯರು, ಶ್ರೀ ವಾಲ್ಮೀಕಿನಗರದ ನಿವಾಸಿಗಳು ಹಾಗೂ ಸ್ಥಳೀಯರು ಇದ್ದರು.
ಗಣೇಶೋತ್ಸವದ ಸಂಭ್ರಮದೊಂದಿಗೆ ಆರೋಗ್ಯ ಸೇವೆ ಹಾಗೂ ರಕ್ತದಾನದಂತಹ ಸಮಾಜಮುಖಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು ಎಂದು ಜಿಬಿಎ ಪ್ರಬಲ ಆಕಾಂಕ್ಷಿ‌ ಅಭ್ಯರ್ಥಿ ಪ್ರಕಾಶ್ ಟಿ ಪತ್ರಿಕೆಗೆ ತಿಳಿಸಿದ್ದಾರೆ.

Written by

Bayalu Simha

Leave a Reply

Your email address will not be published. Required fields are marked *