ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಯಲಹಂಕ ಉಪನಗರ 5ನೇ ಹಂತದ ನೇಹಪ್ರಕಾಶ್ ಆಸ್ಪತ್ರೆಯಿಂದ ಅಟ್ಟೂರು ಕೆರೆಯವರೆಗೆ ಸುಮಾರು 2 ಕೋಟಿ ರು.ಅಂದಾಜು ವೆಚ್ಚದ ಒಳಚರಂಡಿ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ಯಲಹಂಕ ನಗರದ ಟ್ರಾಫಿಕ್ ಅನ್ನು ಕಡಿಮೆ ಮಾಡುವ ದಿಸೆಯಲ್ಲಿ ಈ ಹಿಂದೆ ಯಲಹಂಕ ಉಪನಗರದ 5ನೇ ಹಂತದಿಂದ ಅಟ್ಟೂರು ಕೆರೆಯ ಮಾರ್ಗವಾಗಿ ರಸ್ತೆ ನಿರ್ಮಿಸಲಾಗಿತ್ತು, ಆದರೆ ಈ ರಸ್ತೆ ಮಾರ್ಗದಲ್ಲಿನ ಒಳಚರಂಡಿ ಪೈಪ್ ವಿಸ್ತಾರದಲ್ಲಿ ಕಡಿಮೆ ಇದ್ದುದರಿಂದ ನೀರು ಸರಾಗವಾಗಿ ಹರಿಯದೆ, ಅಲ್ಲಲ್ಲಿ ತೊಂದರೆಯಾಗುಯಾಗುತ್ತಿತ್ತು, ಈ ಹಿನ್ನೆಲೆಯಲ್ಲಿ ಅಗತ್ಯ ಗಾತ್ರದ ಹೊಸ ಪೈಪ್ ಲೈನ್ ಅಳವಡಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಬೇಡಿಕೆ ಇಡಲಾಗಿತ್ತು, ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪೈಪ್ ಲೈನ್ ಅಳವಡಿಕೆಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಇಂದು 2 ಕೋಟಿ ರು.ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಯನ್ನು ಮುಂದಿನ ಎರಡು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಈ ರಸ್ತೆ ಅಭಿವೃದ್ಧಿಯನ್ನು ಅಭಿವೃದ್ಧಿ ಪಡಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಅಟ್ಟೂರು ವಾರ್ಡ್ ಬಿಜೆಪಿ ಮಾಜಿ ಅಧ್ಯಕ್ಷ ರಂಗಸ್ವಾಮಿ, ಯಲಹಂಕ ನಗರ ಮಂಡಲ ಬಿಜೆಪಿ ಉಪಾಧ್ಯಕ್ಷ ಬೆಟ್ಟಹಳ್ಳಿ ಶ್ರೀಕಾಂತ್, ಎಸ್.ಟಿ.ಮೋರ್ಚಾ ಉಪಾಧ್ಯಕ್ಷ ಜಿ.ಆರ್.ಮಂಜುನಾಥ್, ಅಟ್ಟೂರು ವಾರ್ಡ್ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಬಿಜೆಪಿ ಮುಖಂಡರಾದ ಹೆಚ್.ಜಯಣ್ಣ, ಶಿವಕುಮಾರ್(ಆಟೋ), ಶಂಕರ್ ನಾಯ್ಕ್, ಸುಬ್ರಾಮ್ ನಾಯ್ಕ್,, ಮಹಿಳಾ ಮೋರ್ಚಾ ಮುಖಂಡರಾದ ಕವಿತಾ ಶ್ರೀನಿಧಿ, ಭವ್ಯ ಸತೀಶ್, ಶೋಭ ದಿನೇಶ್, ಹರ್ಷಾ ಚರಣ್ ಕುಮಾರ್, ಮಮತಾ ಬಸವರಾಜು, ಮಲ್ಲಿಕಾ ಕೇಶವ್ ಸೇರಿದಂತೆ ಇನ್ನಿತರರಿದ್ದರು
