Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಕಾರಹಳ್ಳಿ ಗ್ರಾಮದಲ್ಲಿ 7ನೇ ವರ್ಷದ ಶ್ರೀ ಆದಿಶಕ್ತಿ ದ್ರೌಪತಮ್ಮ ದೇವಿ ಜಯಂತೋತ್ಸವ

Share

ಬಂಗಾರಪೇಟೆ: ತಾಲೂಕಿನ ಕಾರಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದ ಆವರಣದಲ್ಲಿ ಕಾರಹಳ್ಳಿ, ಕಾರಹಳ್ಳಿ ಬಡಾವಣೆ, ಹಾಗೂ ಜನಘಟ್ಟ ವಹ್ನಿಕುಲ ಕ್ಷತ್ರಿಯ ಕುಲಸ್ಥರ ಹಾಗೂ ಗ್ರಾಮಸ್ಥರ ವತಿಯಿಂದ 7ನೇ ವರ್ಷದ ಶ್ರೀ ಆದಿಶಕ್ತಿ ದ್ರೌಪತಮ್ಮ ದೇವಿ ಜಯಂತೋತ್ಸವವನ್ನು ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಜಯಂತೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಹ್ನಿಕುಲ ಕ್ಷತ್ರಿಯ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.

ಕಾರ್ಯಕ್ರಮದ ಅಂಗವಾಗಿ ದೇವಾಲಯದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಜಯಂತೋತ್ಸವವು ಸಾಂಪ್ರದಾಯಿಕ ಆಚರಣೆಗಳು ಹಾಗೂ ಭಕ್ತಿಗೀತೆಗಳೊಂದಿಗೆ ಸಂಭ್ರಮದಿಂದ ನೆರವೇರಿತು.

ಈ ವೇಳೆ ದ್ರೌಪತಮ್ಮ ದೇವಿಯ ಹುಟ್ಟುಹಬ್ಬದ ಶುಭಾಶಯಗಳು ಕೋರಿ ಮಾತನಾಡಿದ ಕುಲದ ಗೌಡರಾದ ಚಿನ್ನರಾಜು, ನಮ್ಮ ಕುಲದ ಎಲ್ಲೇ ಮಂಜುನಾಥ್ ನೂತನವಾಗಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ವಹ್ನಿಕುಲ ಕ್ಷತ್ರಿಯ ಏಳಿಗೆಗಾಗಿ ಶ್ರಮಿಸಲಿ ಎಂದು ಕೋರಿದರು.

ಈ ಸಂದರ್ಭದಲ್ಲಿ ಯಜಮಾನರು ನಾರಾಯಣಸ್ವಾಮಿ, ಮುಖಂಡರಾದ ಬಾಬು, ಚಿನ್ನಿ ವೆಂಕಟೇಶ್, ಕೃಷ್ಣ, ಗೋವಿಂದರಾಜು, ಚಂದ್ರಶೇಖರ್ ಹಾಗೂ ಕುಲಬಾಂಧವರು ಇದ್ದರು.

Written by

Bayalu Simha

Leave a Reply

Your email address will not be published. Required fields are marked *