ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಜೆಡಿಎಸ್ ಯುವ ಘಟಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ನಾಯಕ, ಮಾಜಿ ನಗರ ಸಭಾ ಸದಸ್ಯ ಶಿವಣ್ಣ ಅವರ ಸುಪುತ್ರ ಅಧ್ಯಕ್ಷ ವಿನಯ್ ಶಿವಣ್ಣ ಅವರ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೀಣ್ಯ 2ನೇ ಹಂತದ ಬಸ್ ನಿಲ್ದಾಣ ಸಮೀಪದ ಗನ್ವಿತ್ ಅಯ್ಯಂಗಾರ್ ಕೇಕ್ ಮನೆ ಬೇಕರಿ ಮುಂಭಾಗದಲ್ಲಿ ಸಮಾಜ ಸೇವಕ ಹಾಗೂ ಬೇಕರಿ ಮಾಲೀಕ ಡಾ. ಮಹೇಂದ್ರ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಸಾರ್ವಜನಿಕರು, ಅಭಿಮಾನಿಗಳು ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿನಯ್ ಶಿವಣ್ಣ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದರು.

ಹುಟ್ಟು ಹಬ್ಬದ ವಿಶೇಷ ಆಕರ್ಷಣೆಯೆಂದರೆ ವಿನಯ್ ಶಿವಣ್ಣ ಅವರ ಅಭಿಮಾನಿಯೊ ಬ್ಬರು ತಮ್ಮ ರಕ್ತದಿಂದ ಬಿಡಿಸಿದ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಈ ವಿಭಿನ್ನ ರೀತಿಯ ಅಭಿಮಾನ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಶಿವಣ್ಣ, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಮುಖಂಡರು ಹಾಗೂ ಹಿತೈಷಿಗಳು ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. “ಹುಟ್ಟುಹಬ್ಬವನ್ನು ಕೇವಲ ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಾರ್ವಜನಿಕರಿಗೆ ಅನ್ನ ನೀಡುವ ಮೂಲಕ ಆಚರಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ,” ಎಂದು ಹೇಳಿದರು.
ಡಾ. ಮಹೇಂದ್ರ ಮಾತನಾಡಿ, “ವಿನಯ್ ಶಿವಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸುವುದು ಉತ್ತಮ ಸಂದೇಶ ನೀಡುತ್ತದೆ. ಯುವಕರು ಇಂತಹ ಸಮಾಜಮುಖಿ ಹಾಗೂ ಜನಪರ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು,” ಎಂದರು.
ಈ ಸಂದರ್ಭದಲ್ಲಿ ನಾಗೇಶ್, ಭರತ್, ಧರ್ಮ, ಗಿರೀಶ್ ಕುಮಾರ್, ಮಧುಕರ್, ಪುನಿ, ಕುಳ್ಳ, ಮನು, ಕಿರಣ್, ಚಿಕ್ಕಣ್ಣ, ಆಟೋ ಶಿವಣ್ಣ, ಗೋವಿಂದ್, ರವಿ, ಶಿವಣ್ಣ, ಶಂಕರ್, ಮಂಜ, ಚಂದ್ರು ಸೇರಿದಂತೆ ಹಲವು ಮುಖಂಡರು, ಅಭಿಮಾನಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
