Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಸಿ ಎಚ್ ಬಿ ಗ್ರೂಪ್ಸ್ ವತಿಯಿಂದ ಗೌರಿ ಗಣೇಶ ಹಬ್ಬದಲ್ಲಿ ಬಾಗಿನ ನೀಡುವುದು ಭಾರತೀಯ ಸತ್ಸಂಪ್ರದಾಯ : ಮೀನಾಕ್ಷಿ ಕೃಷ್ಣಬೈರೇಗೌಡ

Share

ಬ್ಯಾಟರಾಯನಪುರ : ಗೌರಿ ಗಣೇಶ ಹಬ್ಬದ ವೇಳೆಯಲ್ಲಿ ಬಾಗಿನ ನೀಡುವುದು ಭಾರತೀಯ ಪರಂಪರೆಯಲ್ಲಿರುವ ಒಂದು ಸತ್ ಸಂಪ್ರದಾಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ, ಸಚಿವ ಕೃಷ್ಣ ಭೈರೇಗೌಡ ಅವರ ಧರ್ಮಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ ಅವರು ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ಅಗ್ರಹಾರ ಬಡಾವಣೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಸಿಎಚ್‌ಬಿ ಗ್ರೂಪ್ ನ ಮುಖ್ಯಸ್ಥ ಚೊಕ್ಕನಹಳ್ಳಿ ಚಂದ್ರಣ್ಣ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಬಾಗಿನ ಅರ್ಪಣೆ ಮತ್ತು ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಮಹಿಳೆಯರಿಗೆ ಬಾಗಿನ ನೀಡುವುದು ಸೋದರತ್ವದ ಸಂಕೇತವಾಗಿದೆ. ಗೌರಿ ಗಣೇಶ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದ್ದು, ಇದೇ ವೇಳೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಮಹಿಳೆಯರಿಗೆ ಸೋದರತ್ವದ ಸಂಕೇತವಾಗಿ ಬಾಗಿನ ನೀಡುತ್ತಿರುವ ಆಯೋಜಕರ ಕ್ರಮ ನಿಜಕ್ಕೂ ಶ್ಲಾಘನೀಯ ವಾದದ್ದು ಎಂದ ಮೀನಾಕ್ಷಿ ಕೃಷ್ಣ ಬೈರೇಗೌಡರು ಹಾಗೂ

ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅವರು ಮಾತನಾಡಿ ‘ಗೌರಿ ಗಣೇಶ ಹಬ್ಬದಲ್ಲಿ ಸುಗಮ ಸಂಗೀತ, ಆರ್ಕೆಸ್ಟ್ರಾ, ನೃತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಇಂದಿನ ದಿನಗಳಲ್ಲಿ, 600ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ಅರ್ಪಿಸುವುದು, ರಂಗೋಲಿ ಸ್ಪರ್ಧೆ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣೆ, ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸುವಂತಹ ಹಲವು ಸೇವಾ ಕಾರ್ಯಗಳ ಮೂಲಕ ಗೌರಿ ಗಣೇಶ ಹಬ್ಬ ಆಚರಿಸುತ್ತಿರುವುದು ಉತ್ತಮವಾದ ಬೆಳವಣಿಗೆ, ಎಂದರು

ಹಿರಿಯ ಕಾಂಗ್ರೆಸ್ ಮುಖಂಡರಾದ ವೆಂಕಟರಮ ರೆಡ್ಡಿ ರವರು ಮಾತನಾಡಿ ಇಂತಹ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ, ಸಿ ಎಚ್ ಬಿ ಗ್ರೂಪ್ ಮುಖ್ಯಸ್ಥ ಚೊಕ್ಕನಹಳ್ಳಿ ಚಂದ್ರಣ್ಣ ಅವರಿಗೆ ಗೌರಿ, ಗಣೇಶ ಒಳಿತನ್ನು ಮಾಡಲಿ, ಇಂತಹ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸುವ ಶಕ್ತಿ ನೀಡಿ ಮುಂದಿನ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಾಗಿನ ನೀಡುವಂತಹ ಕೆಲಸ ಮಾಡಲಿ ಹಾಗೂ ಇನ್ನೂ ಅನೇಕ ಸಮಾಜ ಸೇವೆಗಳನ್ನು ಅವರು ಮಾಡಲೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ, 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಣೆ, ಸಮಾಜಕ್ಕೆ ಅನುಪಮಾ ಸೇವೆ ನೀಡಿರುವ ಹಲವು ಗಣ್ಯರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು, ಸಿ ಎಚ್‌ ಬಿ ಗ್ರೂಪ್ ನ ಮುಖ್ಯಸ್ಥರಾದ ಚೊಕ್ಕನಹಳ್ಳಿ ಚಂದ್ರಣ್ಣ, ಕೆಂಪಣ್ಣ ​ವೆಂಕಟರಾಮರೆಡ್ಡಿ ​ರಾಜಣ್ಣ ​ಶಿವಕುಮಾರ್ H A​ ಮರಿಯಪ್ಪ
​ಹರೀಶ್ ​ರಮೇಶ್ ನಾಗೇಂದ್ರಕುಮಾರ್ ​ಸೈಯದ್ ಮುನೀರ್ ಸಂದೀಪ್​ ನಜೀರ್
​ಅಜ್ಗರ್ ​ಮಂಜಣ್ಣ ​ಆಂಜಿನಪ್ಪ
​ಮಾರುತಿರುವರು ​ಪದ್ಮನಾಭ
​ಜ್ಯೋತಿ ಸತೀಶ್ ರೆಡ್ಡಿ
​ವೆಂಕಟೇಶ್ ​ ಕೃಷ್ಣಪ್ಪ ​ ಪ್ರಮೋದ್
​ನರಸಿಂಹ ​ ಗಜೇಂದ್ರ​ ಸುರೇಶ್
​ನಾಗರಾಜ್ ​ ಸಂಜಯ್ .
ತಹಸಿಲ್ದಾರ್ ವಿಶ್ವನಾಥ್ ಪ್ರಿನ್ಸಿಪಾಲ್ ವೆಂಕಟೇಶಯ್ಯ ಡಿಡಿಪಿ ಹನುಮಂತಯ್ಯ ಬಿಬಿಎಂಪಿ
ಜಾಲಿಗೆ ಮುನಿರಾಜು ಹಾಗೂ ಸಿಎಚ್‌ಬಿ ಮಹಿಳಾ ಗ್ರೂಪು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಅನೇಕ ಗಣ್ಯರು ಭಾಗವಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು

Written by

Bayalu Simha

Leave a Reply

Your email address will not be published. Required fields are marked *