ಯಲಹಂಕ ಸುದ್ದಿ. ಅಗ್ರಹಾರ ಬಡಾವಣೆ: ಕಾಳಪ್ಪ ರೆಡ್ಡಿ ರಸ್ತೆಯ ಅಗ್ರಹಾರ ಬಡಾವಣೆಯಲ್ಲಿ ಸಿ ಹೆಚ್ ಬಿ ಗ್ರೂಪ್ ಸಂಸ್ಥಾಪಕರಾದ ಚಂದ್ರಣ್ಣ ಚೊಕ್ಕನಹಳ್ಳಿ. ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿರುವ ಅದ್ಧೂರಿ ಗಣೇಶ ವಾರ್ಷಿಕೋತ್ಸ

ಉತ್ಸವದ ಮೊದಲನೇ ದಿನವಾದ 14-09-2026 ರಂದು ಸಂಜೆ 6:00 ಗಂಟೆಗೆ ಶಾಸ್ತ್ರೋಕ್ತವಾಗಿ ಗಣೇಶನ ಪೂಜೆ ನೆರವೇರಿತು. ಈ ಧಾರ್ಮಿಕ ಕಾರ್ಯಕ್ರಮದ ಮೂಲಕ ವಾರ್ಷಿಕೋತ್ಸವದ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅದ್ಧೂರಿ ಚಾಲನೆ ನೀಡಿದರು

ಪೂಜಾ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ನಡೆಯಿತು ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದರು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು ಎಲ್ಲರಿಗೂ ಪ್ರಸಾದ ನೀಡಿದರು ಈ ಸಂದರ್ಭದಲ್ಲಿ ಗಜೇಂದ್ರ ನರಸಿಂಹ ಸೂರಿ ನಾಗರಾಜ್ ವೀರೇಶ್ ಸಂಜಯ್ ಸೇರಿದಂತೆ ಗ್ರೂಪಿನ ಎಲ್ಲಾ ಸದಸ್ಯರು ಉತ್ಸಾಹದಿಂದ. ಭಾಗವಹಿಸಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
