Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಈ ವರ್ಷ ಕುರುಹಿನಶೆಟ್ಟಿ ಸೊಸಾಯಿಟಿಗೆ ಬಾರಿ ಲಾಭ -ಸುಭಾಸ ಬೆಳಕೂಡ ಮೂಡಲಗಿ

Share

ಪಟ್ಟಣದ ಪ್ರತಿಷ್ಠಿತ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೦೨೫-೨೬ನೇ ಈ ವರ್ಷದ ಮಾರ್ಚ ಅಂತ್ಯಕ್ಕೆ ೭.೪೫ ಕೊಟಿ ರೂ. ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ಸುಭಾಸ ಬೆಳಕೂಡ ಅವರು ತಿಳಿಸಿದರು.
ಸೊಸಾಯಿಟಿಯ ಸಭಾ ಭವನದಲ್ಲಿ ಸೋಮವಾರ ನಡೆದ ೩೧ನೇ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಮಾತನಾಡಿದ ಅವರು ಸೊಸಾಯಿಟಿಯು ಈಗಾಗಲೇ ೧೮ ಶಾಖೆಗಳನ್ನು ಹೊಂದಿದ್ದು, ಶೀಘ್ರದಲ್ಲಿ ಇನ್ನೂ ೫ ಶಾಖೆಗಳನ್ನು ಪ್ರಾರಂಭಿಸಲಾಗುವದು ಅಂತ ತಿಳಿಸಿದರು. ಶೇರುದಾರರಿಗೆ ಶೇ.೧೭ ರಷ್ಟು ಲಾಭಾಂಶ ನೀಡಲಾಗುವದು, ಮರಣಹೊಂದಿದ ಶೇರು ಸದಸ್ಯರಿಗೆ ೩೦೦೦ಸಾವಿರ ಧನ ಸಹಾಯ ನೀಡಲಾಗುವದು ಎಂದರು.
ಸದ್ಯ ಸೊಸಾಯಿಟಿಯು ೪.೭೩ ಕೋಟಿ ರೂ. ಶೇರು ಬಂಡವಾಳ, ೩೦.೮೪ ಕೋಟಿ ರೂ. ನಿಗಳು, ೩೩೩.೮೯ ಕೋಟಿ ರೂ. ಠೇವುಗಳು, ೧೧೮.೪೬ ಕೋಟಿ ರೂ. ಗುಂತಾವಣಿಗಳನ್ನು ಹೊಂದಿದೆ. ವಿವಿಧ ಕ್ಷೇತ್ರಗಳಿಗೆ ೨೩೭.೫೪ ಕೋಟಿ ರೂ. ಸಾಲ ನೀಡಿದೆ, ೩೯೧.೪೬ ಕೋಟಿ ರೂ.ದುಡಿಯುವ ಬಂಡವಾಳ ಮತ್ತು ೧.೭೪೨ ಕೋಟಿ ರೂ. ವಾರ್ಷಿಕ ವ್ಯವಹಾರ ಮಾಡಿದೆ ಎಂದರು.
ಪಟ್ಟಣದ ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮೀಗಳು, ಶಿವಾಪೂರದ ಶ್ರೀ ಅಡವಿಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿ, ಆಶೀರ್ವಚನ ನಿಡಿದರು.
ಈ ಸಂದರ್ಭದಲ್ಲಿ ಸೊಸಾಯಿಟಿಯ ಆಡಳಿತ ನಿರ್ದೇಶಕರುಗಳಾದ ಉಪಾಧ್ಯಕ್ಷ ಇಸ್ಮಾಯಿಲ್ ಕಳ್ಳಿಮನಿ, ನಿರ್ದೇಶಕರಾದ ಬಸಪ್ಪ ಮುಗಳಖೋಡ, ಲಕ್ಕಪ್ಪ ಪೂಜೇರಿ, ಗೋಡಚೆಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ರಾಮಪ್ಪ ಬಳೆಗಾರ, ರುಕ್ಮವ್ವಾ ಪೂಜೇರಿ, ಶಾಂತವ್ವಾ ಬೋರಗಲ್, ಶ್ಯಾಲನ್ ಕೊಡತೆ, ಉಮಾ ಬೆಳಕೂಡ ಹಾಗೂ ಶಾಖಾ ಸಲಹಾ ಸಮಿತಿ ಸದಸ್ಯರು ಸಹ ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೋಡಿ ಸ್ವಾಗತಿಸಿ, ವರದಿ ವಾಚನ ಸಿ.ಕೆ.ಕೊಡತೆ ನಿರೂಪಿಸಿದರು. ಶಿವಾನಂದ ಮುರಗೋಡ ವಂದಿಸಿದರು.
ಪೋಟೊ ಪೈಲ್-೩೧ಎಮಡಿಎಲ್-೨
ಮೂಡಲಗಿ ಪಟ್ಟಣದ ಕುರುಹಿನಶೆಟ್ಟಿ ಸೊಸೈಟಿಯ ಸಭಾ ಭವನದಲ್ಲಿ ಸೋಮವಾರ ನಡೆದ ೩೧ನೇ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಸೊಸಾಯಿಟಿ ಅಧ್ಯಕ್ಷ ಸುಭಾಸ ಬೆಳಕೂಡ ಮಾತನಾಡಿದರು

Written by

Bayalu Simha

Leave a Reply

Your email address will not be published. Required fields are marked *