Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಸೆ.5ರಂದು ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್‌ನಲ್ಲಿ ವಿಜ್ಞಾನ ಉದ್ಯಾನ ಉದ್ಘಾಟನೆ :

Share

ಬಳ್ಳಾರಿ. ಸೆ. 02 : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಆಸಕ್ತಿ ಹಾಗೂ ನಾವೀನ್ಯತೆಯ ಚಿಂತನೆ ಬೆಳೆಸುವ ಉದ್ದೇಶದಿಂದ ನಗರದ ವೀರಶೈವ ಕಾಲೇಜು ಮೈದಾನದ ಆವರಣದಲ್ಲಿರುವ ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್‌ನಲ್ಲಿ ಸೆಪ್ಟೆಂಬರ್ 5ರಂದು ಶನಿವಾರ ನಾವೀನ್ಯತೆ ಉತ್ಸವ ಹಾಗೂ ವಿಜ್ಞಾನ ಉದ್ಯಾನ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಅಧ್ಯಕ್ಷ ಏಳುಬೆಂಚಿ ರಾಜಶೇಖರ ತಿಳಿಸಿದರು.

ನಗರದ ವಿ ವಿ ಸಂಘದ ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜಶೇಖರ್ , ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಮತ್ತು ವೈಜ್ಞಾನಿಕ ಚಿಂತನೆಯನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,
ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಅಧ್ಯಕ್ಷರಾದ ಎ.ಎಸ್. ಕಿರಣ್ ಕುಮಾರ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಡಿ.ಆರ್‌.ಡಿ.ಒ ದ ವೈಮಾನಿಕ ಅಭಿವೃದ್ಧಿ ಸ್ಥಾಪನೆಯ ನಿವೃತ್ತ ವಿಜ್ಞಾನಿ ‘ಜಿ’ ಡಾ. ವಿ. ಸುಬ್ರಮಣಿಯನ್, ವಿಜ್ಞಾನಿ ‘ಎಫ್’ ಡಾ. ಬಾಲಸುಬ್ರಮಣಿಯನ್ ಎಸ್., ಹಾಗೂ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಐಪಿಎಸ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ
ಮತ್ತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ವಿ.ವಿ. ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್, ಕಾರ್ಯದರ್ಶಿ ಡಾ. ಅರವಿಂದ್ ಪಟೇಲ್, ಖಜಾಂಚಿ ಬೈಲುವದ್ದಿಗೇರಿ ಯೆರ್ರಿಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್‌ನ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಯುವ ಸಂಶೋಧಕರನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯ ಅಣ್ಣಾ ವಿರೂಪಾಕ್ಷಪ್ಪ ಹಾಗೂ ಶಾಲೆಯ ಪ್ರಾಂಶುಪಾಲರಾದ ಸುನಂದಾ ಎಂ. ಪಾಟೀಲ್, ವಸಂತ್ ಸೇರಿದಂತೆ ಇತರರು ಇದ್ದರು.

Written by

Bayalu Simha

Leave a Reply

Your email address will not be published. Required fields are marked *