Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ವೈದ್ಯರ ರಕ್ಷಣೆಗಾಗಿ ‘ಓಝೋನ್ ಶೀಲ್ಡ್’ (OZONE SHIELD) ಎಂಬ ವಿಶಿಷ್ಟ ಉಪಕ್ರಮವನ್ನು ಓಝೋನ್ ಫಾರ್ಮಾಸ್ಯುಟಿಕಲ್ಸ್ ಪ್ರಾರಂಭ

Share

ಬೆಂಗಳೂರು : ಸೆಪ್ಟೆಂಬರ್ 24, 2026 : ಓಜೋನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಇಂದು ಒಂದು ವಿಶೇಷ ಕಾರ್ಯಕ್ರಮದಲ್ಲಿ ‘ಓಜೋನ್ ಶೀಲ್ಡ್’ (Ozone SHIELD) ಅನ್ನು ಪ್ರಾರಂಭಿಸಿತು. ವೈದ್ಯರ ಕ್ಷೇಮ ಮತ್ತು ಸುರಕ್ಷತೆಗಾಗಿ ಭಾರತೀಯ ಔಷಧೀಯ ಕಂಪನಿಯೊಂದು ಕೈಗೊಂಡಿರುವ ಇಂತಹ ಮೊದಲ ಉಪಕ್ರಮ ಇದಾಗಿದೆ.

ವೈದ್ಯರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ, ಕಿರುಕುಳ ಮತ್ತು ಆಧಾರರಹಿತ ಕಾನೂನು ಮೊಕದ್ದಮೆಗಳ ಹಿನ್ನೆಲೆಯಲ್ಲಿ ಈ ಉಪಕ್ರಮವನ್ನು ರೂಪಿಸಲಾಗಿದೆ; ಅಂತಹ ಅಹಿತಕರ ಸನ್ನಿವೇಶಗಳಲ್ಲಿ ಸಿಲುಕಿಕೊಂಡಾಗ ವೈದ್ಯರಿಗೆ ಭದ್ರತಾ ನೆರವು, ಕಾನೂನು ನೆರವು ಮತ್ತು ಭಾವನಾತ್ಮಕ ಯೋಗಕ್ಷೇಮದ ಬೆಂಬಲವನ್ನು ‘ಓಜೋನ್ ಶೀಲ್ಡ್’ ಒದಗಿಸುತ್ತದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಡಾ. ಕಿರಣ್ ಬೇಡಿ (ಐಪಿಎಸ್) ಅವರು ಈ ಉಪಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು.
“ಔಷಧೀಯ ಉದ್ಯಮ ಮತ್ತು ವೈದ್ಯರು ಸಮಾಜದ ಸೇವೆಗಾಗಿ ಒಂದೇ ತಂಡವಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ. ವೈದ್ಯರು ವಿವೇಚನಾರಹಿತ ಹಿಂಸೆ ಅಥವಾ ಅನಗತ್ಯ ಕಾನೂನು ಕಿರುಕುಳವನ್ನು ಎದುರಿಸಬೇಕಾದಾಗ, ಅವರನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗುತ್ತದೆ. ‘ರಕ್ಷಕರನ್ನು ರಕ್ಷಿಸುವುದು’ ಎಂಬುದೇ ‘ಓಝೋನ್ ಶೀಲ್ಡ್’ (Ozone SHIELD) ನ ಪ್ರಮುಖ ಉದ್ದೇಶವಾಗಿದೆ; ಏಕೆಂದರೆ ಬೆದರಿಕೆ ಅಥವಾ ಆಘಾತಕ್ಕೆ ಒಳಗಾಗುವ ವೈದ್ಯರು ಎಂದರೆ ಅದು ಇಡೀ ಸಮಾಜವೇ ಅನುಭವಿಸುವ ನಷ್ಟವಾಗಿದೆ. ವೈದ್ಯಕೀಯ ಸಮುದಾಯವು ನಮಗಾಗಿ ಮಾಡುವ ಎಲ್ಲ ಸೇವೆಗಳಿಗೆ ಪ್ರತಿಯಾಗಿ ಅವರಿಗೇನನ್ನಾದರೂ ಮರಳಿಸುವುದನ್ನು ನಾವು ನಮ್ಮ ಜವಾಬ್ದಾರಿ ಮತ್ತು ಬದ್ಧತೆ ಎಂದು ಪರಿಗಣಿಸುತ್ತೇವೆ,” ಎಂದು ಓಝೋನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಭಾಷ್ ಸೆಹಗಲ್ ಹೇಳಿದರು.

Written by

Bayalu Simha

Leave a Reply

Your email address will not be published. Required fields are marked *