ಪೀಣ್ಯ ದಾಸರಹಳ್ಳಿ: ಮಲ್ಲೇಶ್ವರಂನಲ್ಲಿ ಅಭಯ ಸಮಾಜ ಸೇವಾಸಂಘ ಹಾಗೂ ಪ್ರಗತಿ ಮಹಿಳಾ ಸಂಘದ ವತಿಯಿಂದ ಡಾ. ಎಸ್ ಎಸ್ ಹಿರೇಮಠ್ ಅವರ ಹುಟ್ಟುಹಬ್ಬವನ್ನು ಭಾರತೀಯ ಸಂಸ್ಕೃತಿ ಸಂಪ್ರದಾಯದಂತೆ ಅರ್ಥ ಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಡಾ. ಎಸ್ ಎಸ್ ಹಿರೇಮಠ್ ಅವರು ಸರಳ ಸಜ್ಜನಿಕೆ ವ್ಯಕ್ತಿತ್ವದ ಹೊಂದಿದ ಏಕೈಕ ವ್ಯಕ್ತಿ ಎಂದರೆ ತಪ್ಪಾಗಲಾರದು ಎಂದು ಅಧ್ಯಕ್ಷ ಅಭಯ ಕೃಷ್ಣಯ್ಯ ಅವರು ಹಿರೇಮಠ್ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಗತಿ ಮಹಿಳಾ ಸಂಘದ ಅಧ್ಯಕ್ಷೆ ಶೃತಿದೇವಿ, ಮಾನವ ಹಕ್ಕುಗಳ ಹೋರಾಟಗಾರ ಮಂಜುನಾಥ, ಕ್ರಿಸ್ಟಿನಾ, ಬಿಜೆಪಿ ಮುಖಂಡ ಹಾಗೂ ವೀರಶೈವ ಲಿಂಗಾಯತ ಮುಖಂಡ ರಾಘವೇಂದ್ರ, ಶಿವಕುಮಾರ, ಮಲ್ಲಿಕಾರ್ಜುನ ಸ್ವಾಮಿ, ಅಭಯ ಸಮಾಜದ ಪದಾಧಿಕಾರಿಗಳು ಸದಸ್ಯರು ಮತ್ತು ಹಿರೇಮಠ್ ಅವರ ಅಪಾರ ಅಭಿಮಾನಿಗಳು ಡಾ. ಎಸ್ ಎಸ್ ಹಿರೇಮಠ್ ಅವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಶುಭ ಹಾರೈಸಿದರು. ನಂತರ ಹಿರೇಮಠ್ ಅವರು ಸರ್ವರಿಗೂ ಅಭಿನಂದಿಸಿದರು
