ಕಲಬುರಗಿ ಹತ್ತಿರ ಇರುವ ಹತಗುಂಡಿ ಇಲ್ಲಿ ಎಲ್ಲ ಶಿವಶರಣರು ಭಕ್ತಿಯಿಂದ ಪೂಜೆಗಾಗಿ 9 ಗುಂಡಿಗಳನ್ನು ಅಗೆದರೂ ನೀರು ಬರದೇ ಇದ್ದಾಗ, ಅವರು ಕಲ್ಯಾಣಮ್ಮ ಅವರಿಗೆ, “ನೀನಾದರೂ ಭಕ್ತಿಯಿಂದ ಪೂಜೆ ಮಾಡಿ, ನೀರು ಬರಸಮ್ಮ” ಅಂತ ವಿನಂತಿ ಮಾಡಿದಾಗ, ಕಲ್ಯಾಣಮ್ಮ ನವರು ತಮ್ಮ ಭಕ್ತಿಯಿಂದ ಪೂಜೆಗಾಗಿ, 10 ನೆ ಗುಂಡಿ ತೋಡಿ, ಆಗ ನೀರು ಬಂದು ಪೂಜೆ ಮಾಡಿ, ಕುಡಿಯುವ ನೀರಾಗಿ, “ಬಸವತೀರ್ಥ” ಎಂದು ನಾಮಕರಣ ಮಾಡಿದರು.

ಅಲ್ಲಿ ಪ್ರತಿವರ್ಷ ಅಲ್ಲಿನ ಸ್ಥಳೀಯರು ಜಾತ್ರೆ ಮಾಡುತ್ತಾರೆ.


ನಮ್ಮ ಕಲಬುರಗಿ ಸಮಾಜದ ನಾವೆಲ್ಲರೂ ಸೇರಿ, ಕಲಬುರಗಿ ಇಂದ ಕಲ್ಯಾಣಮ್ಮ ನವರ ಜ್ಯೋತಿ ತೆಗೆದುಕೊಂಡು ಹೋಗಿ, ನಮ್ಮ ಸಮಾಜದ ಜನರೂ ಅವರ
ಜೊತೆ ಸೇರಿ ಜಾತ್ರೆ ಮಾಡಿದೆವು.


