Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಹಾಲು ಉತ್ಪಾದಕರ ಸಹಕಾರ ಮತ್ತು ಪಾರದರ್ಶಕ ಆಡಳಿತದಿಂದಾಗಿ ಸಂಘ ಲಾಭದಾಯಕವಾಗಿದೆ :ಕಿರಣ್ ಕುಮಾರ್

Share

ಬಂಗಾರಪೇಟೆ: ಸಂಘಕ್ಕೆ ರೈತರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದ ಪ್ರತಿಫಲವಾಗಿ ಇಂದು ಸಂಘ ಉತ್ತಮ ಲಾಭದಾಯಕವಾಗಿ ನಡೆಯುತ್ತಿದೆ ಎಂದು ತಾಲ್ಲೂಕು ಒಕ್ಕೂಟದ ವಿಸ್ತರಣಾಧಿಕಾರಿ ಕಿರಣ್ ಕುಮಾರ್ ಹೇಳಿದರು.

ತಾಲೂಕಿನ ಕಾರಮಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಯದರ್ಶಿ ಹಾಗೂ ಸಿಬ್ಬಂದಿಯ ಉತ್ತಮ ಕಾರ್ಯನಿರ್ವಹಣೆ, ಹಾಲು ಉತ್ಪಾದಕರ ಸಹಕಾರ ಮತ್ತು ಪಾರದರ್ಶಕ ಆಡಳಿತದಿಂದಾಗಿ ಈ ಸಂಘವು ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದರು.

ಸಂಘದ ಅಭಿವೃದ್ಧಿಯಲ್ಲಿ ಹಾಲು ಉತ್ಪಾದಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ರೈತರಿಂದ ಗುಣಮಟ್ಟದ ಹಾಲು ಸಂಗ್ರಹಿಸಿ, ಸಕಾಲದಲ್ಲಿ ಪಾವತಿ ಮಾಡುವುದರೊಂದಿಗೆ ಸಂಘವನ್ನು ಮತ್ತಷ್ಟು ಸದೃಢಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸಂಘವು ಒಟ್ಟು 10,53,975 ನಿವ್ವಳ ಲಾಭ ಗಳಿಸಿರುವುದು ಸಂತಸದ ವಿಚಾರವಾಗಿದೆ, ಸಂಘದ ಉತ್ತಮ ನಿರ್ವಹಣೆ ಹಾಗೂ ಕಾರ್ಯದರ್ಶಿ ಮತ್ತು ಸಿಬ್ಬಂದಿಯ ಶ್ರಮದಿಂದಾಗಿ ಸಂಸ್ಥೆ ನಿರಂತರವಾಗಿ ಆದಾಯದ ಹಾದಿಯಲ್ಲಿ ಸಾಗುತ್ತಿದೆ, ಸಂಘದ ವ್ಯವಹಾರದಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸಂಘದ ಒಟ್ಟು ವ್ಯಾಪಾರ ಲಾಭ 22,12,878 ಆಗಿದ್ದು, ಬಿಎಂಸಿ ವಿಭಾಗದಿಂದಲೂ 1,97,411 ಲಾಭ ಗಳಿಸಲಾಗಿದೆ. ಸಂಘವು ಒಕ್ಕೂಟದೊಂದಿಗೆ ಉತ್ತಮ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದೆ ಎಂದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಮುನಿಸ್ವಾಮಿಪ್ಪ, ವಿಸ್ತರಣಾಧಿಕಾರಿ ಭಾನುಪ್ರಕಾಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ನಿರ್ದೆಶಕರುಗಳಾದ ಗಂಗಪ್ಪ, ಮುನಿಯಪ್ಪ, ಈಶ್ವರಪ್ಪ, ಮಣಿ, ಕೃಷ್ಣಪ್ಪ ಗಂಗಮ್ಮ, ಚೌಡಮ್ಮ, ಮಂಜುಳಾ, ಸಿಬ್ಬಂದಿ ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು

Written by

Bayalu Simha

Leave a Reply

Your email address will not be published. Required fields are marked *