Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಸಮಾಜದಲ್ಲಿ ಪ್ರತಿಯೊಬ್ಬರಿಗೆ ಸಾಧನೆ ಮುಖ್ಯ : ಸರ್ವೋತ್ತಮ ಜಾರಕಿಹೊಳಿ

Share

ಮೂಡಲಗಿ : ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರೂ ಸಾಧನೆ ಮಾಡಬೇಕು ಆ ನಿಟ್ಟಿನಲ್ಲಿ ಯುವ ಸಂಘಟನೆಗಳು ಕೆಲಸ ಮಾಡಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಹೇಳಿದರು.

ಅವರು ಮೂಡಲಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಮೂಡಲಗಿ ಇಮಾಮಸಾಬ ಜಾತಗಾರ (ಮಂಟೂರ್) ಸಿದ್ದಿಮೇಳ ಕಲಾವಿದರ ಸಂಘದಿಂದ ಹಮ್ಮಿಕೊಂಡ ಮಾಧ್ಯಮ ರತ್ನ ಪ್ರಶಸ್ತಿ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಮತ್ತು ಜಾನಪದ ಕಲಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ಸಿದ್ದಿ ಕುಣಿತ ಕಲಾ ಸಂಘದ ಅಧ್ಯಕ್ಷ ಚುಟುಕುಸಾಬ ಜಾತಗಾರ (ಮಂಟೂರ) ಅವರು ಬಡ ಕಲಾವಿದರಾಗಿದ್ರು ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದು ಅವರ ಕಾರ್ಯ ನಿಜವಾಗಲೂ ಶ್ಲಾಘನಿಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಡಾ. ಶಿವಲಿಂಗಪ್ಪ ಬಿ ಪಾಟೀಲ್, ಡಾ. ಎಸ್ ಎಸ್ ಪಾಟೀಲ್, ಪಿಎಸ್ಐ ಯಮನಪ್ಪ ಬಿಸನಾಳ, ಲಕ್ಷ್ಮಣ ಗುಡೆರ್, ಮಲಿಕ್ ಭಾಗವಾನ, ಈರಪ್ಪ ಡವಳೇಶ್ವರ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಮುಂತಾದವರು ಉಪಸ್ಥಿತರಿದ್ದರು. ಕೇಂದ್ರದ ಶುಶ್ರುಷಾಧಿಕಾರಿ ವಿಠ್ಠಲ ಪಾಟೀಲ, ಹಿರಿಯ ಪತ್ರಕರ್ತರಾದ ಲಿಂಗಪ್ಪ ಗಾಡವಿ, ಅಲ್ತಾಫ್ ಹವಾಲ್ದಾರ ಯುವ ಪತ್ರಕರ್ತರಾದ ವಿವೇಕಾನಂದ ಹೂಗಾರ, ರಮೇಶ್ ವಂಟಗೂಡಿ ಹಾಗೂ ಕಲಾವಿದ ನಾಗೇಂದ್ರ ಮಾನೆ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Written by

Bayalu Simha

Leave a Reply

Your email address will not be published. Required fields are marked *